ಹಿರಿಯ ನಟಿ ಲೀಲಾವತಿ ನಿಧನ: ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಅಂತಿಮ ದರುಶನಕ್ಕೆ ವ್ಯವಸ್ಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ.

ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪ್ರಾರ್ಥಿವ ಶರೀರದ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮಗನಾದ ವಿನೋಧ್‌ ರಾಜ್‌ ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಲೀಲಾವತಿ ಅವರ ಮೃತ ದೇಹವು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿದ್ದು, ನೆಲಮಂಗದಲ್ಲಿರುವ ಅಂಬೇಡ್ಕರ್‌ ಮೈದಾನದಲ್ಲಿ ಸಕಲ ಸಿದ್ದತೆಯನ್ನು ನಡೆಸಲಾಗಿದ್ದು, ಎಲ್ಲವೂ ಅಂತಿಮ ಗೊಂಡ ಬಳಿಕ ಅವರ ಮೃತ ದೇಹವನ್ನು ಮೊದಲು ಅವರ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ಅವರ ಪ್ರಾರ್ಥಿವ ಶರೀರಕ್ಕೆ ಪೂಜ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾಪಸ್ಸು ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರುಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ.

ಎಲ್ಲರೂ ದಯವಿಟ್ಟು ಅಂತಿಮ ವಿಧಿ ವಿಧಾನಕ್ಕೆ ಸಹಕಾರ ನೀಡಬೇಕು ಅಂತ ಮನವಿ ಮಾಡಿದರು. ಇನ್ನೂ ನಾಳೆ ಸಂಜೆ ಹೊತ್ತಿಗೆ ಲೀಲಾವತಿ ಅವರ ಅಂತ್ಯ ಕ್ರಿಯೆ ಅವರ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೇರವೇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!