ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲ ತಿಂಗಳುಗಳಿಂದ ನಯನತಾರಾ ಡಿವೋರ್ಸ್ ವಿಚಾರ ಕುರಿತು ಗುಮಾನಿ ಹಬ್ಬಿದೆ. ಈ ಬಾರಿ ವದಂತಿಗಳಿಗೆ ತಕ್ಕ ಉತ್ತರ ಕೊಡುವಂತಹ ಪೋಸ್ಟ್ ಅನ್ನೇ ನಟಿ ಹಂಚಿಕೊಂಡಿದ್ದಾರೆ. ‘ನನ್ನವನು’ ಎಂದು ಅಡಿಬರಹ ನೀಡಿ ಪತಿ ವಿಘ್ನೇಶ್ ಜೊತೆಗಿನ ಚೆಂದದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.
ಹಸಿರಾದ ಗಾರ್ಡನ್‌ನಲ್ಲಿ ನಯನತಾರಾ ದಂಪತಿ ಹೆಜ್ಜೆ ಹಾಕುತ್ತಿರುವ ಫೋಟೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಕ್ಯೂಟ್, ಬ್ಯೂಟಿಫುಲ್ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ ಹರಿದು ಬಂದಿದೆ..