ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ನೇಹಾಗೌಡ ಹಾಗೂ ಚಂದನ್ ದಂಪತಿ ಮಗುವಿನ ನಾಮಕರಣ ನಿನ್ನೆ ಅದ್ಧೂರಿಯಾಗಿ ನಡೆದಿದೆ. ನಟಿ ಮಗಳಿಗೆ ಈಗಿನ ಕಾಲದ ಹೆಸರಲ್ಲದೆ ಹಳೆಯ ಸುಂದರ ಹೆಸರೊಂದನ್ನು ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೇಹಾ ಮಗಳ ನಾಮಕರಣ ಸಮಾರಂಭ ಜರುಗಿದೆ. ಈ ಕಾರ್ಯಕ್ರಮಕ್ಕೆ ಕಿರುತೆರೆ ನಟ- ನಟಿಯರು ಭಾಗಿಯಾಗಿ ನೇಹಾ ಮಗಳಿಗೆ ಶುಭಕೋರಿದ್ದಾರೆ.
ಹೊಸ ಟ್ರೆಂಡ್‌ನ್ನು ಪಕ್ಕಕ್ಕಿಟ್ಟು ನಟಿ ನೇಹಾ ತಮ್ಮ ಮಗಳಿಗೆ ಶಾರದ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಈಗಿನ ಹೆಸರುಗಳ ಮಧ್ಯೆ ಹಳೇ ಹಾಗೂ ಎವರ್‌ಗ್ರೀನ್ ಹೆಸರುಗಳಿಗೆ ಬೇಡಿಕೆ ಹೆಚ್ಚಾಗಿದೆ. ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳಿಗೆ ಮಾಲತಿ ಎಂದು ಹೆಸರಿಟ್ಟಿದ್ದಾರೆ, ಇನ್ನು ಬಿಪಾಶಾ ಬಸು ಕೂಡ ತಮ್ಮ ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.