ಖುಷಿ ವಿಚಾರ ಹಂಚಿಕೊಂಡ ನಟಿ ನೇಹಾ ಗೌಡ: ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕನ್ನಡ ಸೀರಿಯಲ್‌ ನಟಿ ನೇಹಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಆರು ವರ್ಷಗಳ ಬಳಿಕ ನೇಹಾ , ಚಂದನ್‌ ಗೌಡ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ.

ಈ ಕುರಿತು ಖುಷಿ ವಿಚಾರವನ್ನು ಹಂಚಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಈ ವಿಚಾರ ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಇದರ ಕ್ಯೂಟ್‌ ವಿಡಿಯೋವನ್ನು ಹಂಚಿಕೊಂಡಿರುವ ನೇಹಾ ಗೌಡ, ತಮ್ಮ ಕುಟುಂಬ ದೊಡ್ಡದಾಗುತ್ತಿದೆ ಎಂದು ಹೇಳಿದ್ದಾರೆ.

‘ನಮ್ಮ ಕುಟುಂಬಕ್ಕೆ ಹೊಸ ಜೀವ ಸ್ವಾಗತಿಸಲು ನಾವು ತಯಾರಿ ನಡೆಸುತ್ತಿರುವಾಗ, ನಮ್ಮ ಹೃದಯವು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿ ತುಳುಕುತ್ತಿದೆ’ ಎಂದು ಅವರು ಬರೆದಿದ್ದಾರೆ.

‘ನಿಮ್ಮಲ್ಲಿ ಹಲವರು ಅದನ್ನು ಊಹಿಸಿದ್ದಾರೆ ಮತ್ತು ಹೌದು, ನೀವು ಹೇಳಿದ್ದು ಸರಿ! ನಮ್ಮ ಕುಟುಂಬ ಎರಡರಿಂದ ಮೂರಕ್ಕೆ ಬೆಳೆಯುತ್ತಿದೆ. ನಿದ್ದೆಯಿಲ್ಲದ ರಾತ್ರಿಗಳು, ಅಂತ್ಯವಿಲ್ಲದ ನಗು ಮತ್ತು ಮಿತಿಯಿಲ್ಲದ ಪ್ರೀತಿಯಿಂದ ತುಂಬಿರುವ ಈ ಹೊಸ ಅಧ್ಯಾಯಕ್ಕಾಗಿ ನಾವು ಹೆಚ್ಚು ಉತ್ಸುಕರಾಗದೇ ಇರಲು ಸಾಧ್ಯವಿಲ್ಲ..’ ಎಂದು ನೇಹಾ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನೇಹಾ ಗೌಡ, 2018ರಲ್ಲಿ ಬಾಲ್ಯದ ಗೆಳೆಯ ಚಂದನ್‌ ಗೌಡ ಅವರನ್ನು ವಿವಾಹವಾಗಿದ್ದರು.ಇದಕ್ಕೂ ಮುನ್ನ ಅಮೆರಿಕ ಹಾಗೂ ಹಾಂಕಾಂಗ್‌ನಲ್ಲಿ ಕೆಲಸ ಮಾಡಿದ್ದ ಚಂದನ್‌ ಗೌಡ, ಇತ್ತೀಚೆಗೆ ಸೀರಿಯಲ್‌ ನಟರಾಗಿಯೂ ಪಾದಾರ್ಪಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!