ಸೆ.25ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟಿ ಪರಿಣಿತಿ ಚೋಪ್ರಾ-ಸಂಸದ ರಾಘವ್ ಚಡ್ಡಾ ಜೋಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಅವರು ಸೆಪ್ಟೆಂಬರ್ 25 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಯುವ ಸಂಸದ, ಆಮ್ ಆದ್ಮಿ ಪಕ್ಷದ ಯುವ ಮುಖಂಡ ರಾಘವ್ ಚಡ್ಡಾ ಕೆಲ ತಿಂಗಳ ಹಿಂದೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಕೆಲ ಸಮಯದಿಂದ ಪ್ರೀತಿಯಲ್ಲಿದ್ದು, ತಮ್ಮ ಪ್ರೀತಿಯನ್ನು ವಿವಾಹವನ್ನಾಗಿ ಪರಿವರ್ತಿಸಲು ನಿಶ್ಚಯಿಸಿ ಕೆಲವು ತಿಂಗಳ ಹಿಂದಷ್ಟೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಈ ಜೋಡಿಯ ವಿವಾಹ ದಿನಾಂಕ ಸಹ ನಿಶ್ಚಯವಾಗಿದೆ.

ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಈ ಜೋಡಿ ವಿವಾಹವಾಗಲಿದ್ದು , ಈಗಾಗಲೇ ಖರೀದಿ ಕಾರ್ಯ, ಅತಿಥಿಗಳ ಅಂತಿಮ ಪಟ್ಟಿ ತಯಾರಿ, ಮದುವೆ ನಡೆಯುವ ಸ್ಥಳ ನಿಗದಿ ಇನ್ನಿತರೆ ಕಾರ್ಯಗಳು ಮುಗಿದಿವೆ ಎನ್ನಲಾಗುತ್ತಿದೆ. ಮಾಮೂಲಿನಂತೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರುಗಳು ಡಿಸೈನರ್ ಬಟ್ಟೆಗಳಲ್ಲಿ ಮಿಂಚಲಿದ್ದಾರೆ. ಇನ್ನು ಪರಿಣಿತಿ ಡಿಸೈನರ್ ಆಭರಣಗಳನ್ನು ಧರಿಸಲಿದ್ದು, ಅವುಗಳೂ ಸಹ ತಯಾರಾಗಿವೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!