ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineeti Chopra) ಹಾಗು ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇತ್ತ ರಾಜ್ಯಸಭೆಯಲ್ಲೂ ವದಂತಿಗಳು ಹರಿದಾಡುತ್ತಿದೆ.
ರಾಜ್ಯಸಭೆಯಲ್ಲಿ ಮೆಹುಲ್ ಚೋಕ್ಸಿ ಅವರ ಆಂಟಿಗುವಾ ಪೌರತ್ವಕ್ಕೆ ಸರ್ಕಾರದ ಎನ್‌ಒಸಿ ಕುರಿತು ಚರ್ಚಿಸಲು ಚಡ್ಡಾ ವ್ಯವಹಾರದ ಸೂಚನೆಯನ್ನು ರದ್ದು ಮಾಡಲು ಮನವಿ ಮಾಡಿದಾಗ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ (Jagdeep Dhankar), ಅವರು ತಮಾಷೆಯಾಗಿ ಕಾಲೆಳೆದಿದ್ದಾರೆ.
ನೀವು ಈಗಾಗಲೇ ಇದ್ದೀರಿ, ನೀವು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದೀರಿ. ಇದು ನಿಮಗೆ ಸುಮ್ಮನಿರುವ ದಿನವಾಗಿರಬಹುದು ಎಂದುಕಲಾಪ ವೇಳೆ ಜಗದೀಪ್ ಧನ್ಖರ್ ಹೇಳಿದ್ದಾರೆ.
ಸಭಾಪತಿಯವರ ಕಾಮೆಂಟ್ ಬಗ್ಗೆ ಏನನ್ನೂ ಉಲ್ಲೇಖಿಸದಿದ್ದರೂ ಎಎಪಿ ಸಂಸದರೇ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
In Parliament today, I gave a suspension of business notice under rule 267 to discuss Govt.’s NOC to Mehul Choksi’s Antigua citizenship and its subsequent failure to present a strong case before Interpol, which led to the withdrawal of the red corner notice against him. pic.twitter.com/ygM9xSIqm1
— Raghav Chadha (@raghav_chadha) March 24, 2023
ರಾಘವ್ ಮತ್ತು ಪರಿಣಿತಿ ಅವರು ಮುಂಬೈನಲ್ಲಿ ಮಧ್ಯಾಹ್ನದೂಟ ಮತ್ತು ರಾತ್ರಿ ಭೋಜನಕ್ಕೆ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ವದಂತಿಗಳ ಹರಿದಾಡಿವೆ. ಆದರೆ ಇವರಿಬ್ಬರೂ ಡೇಟಿಂಗ್ ವದಂತಿಗಳನ್ನು ನಿರಾಕರಿಸಲಿಲ್ಲ. ಡೇಟಿಂಗ್ ವದಂತಿಗಳ ಬಗ್ಗೆ ಕೇಳಿದಾಗ ‘ಪರಿಣಿತಿ ಬಗ್ಗೆ ಅಲ್ಲ, ರಾಜನೀತಿ (ರಾಜಕೀಯ) ಬಗ್ಗೆ ನನ್ನನ್ನು ಕೇಳಿ’ ಎಂದಿದ್ದರು.
ನೀವು ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೀರಾ. ಮದುವೆ ಸುದ್ದಿ ನಿಜವೇ?’ ಎಂದು ರಾಘವ್ ಅವರಲ್ಲಿ ಕೇಳಲಾಗಿತ್ತು. ಇದಕ್ಕೆ ಅವರು ‘ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿ, ಪರಿಣಿತಿಗೆ ಸಂಬಂಧಿಸಿದ್ದು ಅಲ್ಲ ಎಂದು ನಗುತ್ತಾ ಉತ್ತರಿಸಿದ್ದಾರೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪರಿಣಿತಿ ಹಾಗೂ ರಾಘವ್ ಚಡ್ಡಾ ಜತೆಯಾಗಿ ಓದಿದ್ದರು. ಹೀಗಾಗಿ ಇವರ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದೆ. ಈ ಕಾರಣಕ್ಕೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.