ಇಂಡಿಗೋ ಸಿಬ್ಬಂದಿಯ ಅಸಭ್ಯ ವರ್ತನೆ ಕುರಿತು ಟ್ವೀಟ್‌ ಮಾಡಿದ ನಟಿ ಪೂಜಾ ಹೆಗ್ಡೆ: ಟ್ವೀಟ್‌ನಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಡಿಗೋ ಏರ್‌ ಲೈನ್ಸ್‌ ಸಿಬ್ಬಂದಿಯೊಬ್ಬನ ಅಸಭ್ಯವರ್ತನೆ ಕುರಿತು ಟಾಲಿವುಡ್‌ ಬೆಡಗಿ ಪೂಜಾಹೆಗ್ಡೆ ಟ್ವೀಟ್‌ ಮಾಡಿದ್ದು ಆಕೆಯೊಂದಿಗೆ ಬೆದರಿಸುವ ಧ್ವನಿಯಲ್ಲಿ ಮಾತನಾಡಿ ದುರ್ವರ್ತನೆ ತೋರಿದ ಸಿಬ್ಬಂದಿಯೊಬ್ಬನ ಬಗ್ಗೆ ನಟಿ ದೂರಿದ್ದಾರೆ.

ಇಂಡಿಗೋ ಸಿಬ್ಬಂದಿಯಾದ ವಿಪುಲ್ ನಕಾಶೆ ಎಂಬಾತ ಅವರೊಂದಿಗೆ ದುರಹಂಕಾರಿಯಾಗಿ ವರ್ತಿಸಿ ಬೆದರಿಸಿದ್ದಾನೆಂದು ನಟಿ ದೂರಿದ್ದಾರೆ. ತಾನು ಯಾವಾಗಲೂ ಈ ಥರದ ವಿಷಯಗಳ ಕುರಿತು ಟ್ವೀಟ್‌ ಮಾಡುವುದಿಲ್ಲ. ಆದರೆ ಈ ಸಮಸ್ಯೆಯು ಭಯಾನಕವಾಗಿರುವುದರಿಂದ ಎಲ್ಲರ ಗಮನಕ್ಕೆ ತರಬೇಕೆಂದು ಟ್ವೀಟ್‌ ಮಾಡಿರುವುದಾಗಿ ಹೇಳಿದ್ದಾರೆ. ಟ್ವೀಟ್‌ ನಲ್ಲಿ ಕಂಪನಿಯನ್ನು ಟ್ಯಾಗ್‌ ಮಾಡಿ “ಇಂದು ಮುಂಬೈನ ನಮ್ಮ ವಿಮಾನದಲ್ಲಿ ವಿಪುಲ್ ನಕಾಶೆ ಎಂಬ ಹೆಸರಿನ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದು ತುಂಬಾ ದುಃಖಕರವಾಗಿದೆ. ಯಾವುದೇ ಕಾರಣವಿಲ್ಲದೆ ನಮ್ಮೊಂದಿಗೆ ಸಂಪೂರ್ಣವಾಗಿ ಸೊಕ್ಕಿನ ಮತ್ತು ಬೆದರಿಕೆಯ ಧ್ವನಿಯನ್ನು ಬಳಸಲಾಗಿದೆ” ಎಂದಿದ್ದಾರೆ.

ಈ ಕುರಿತು ಇಂಡಿಗೋ ಕಂಪನಿಯು ತಕ್ಷಣವೇ ಪ್ರತಿಕ್ರಿಯಿಸಿದ್ದು ಸಿಬ್ಬಂದಿಯ ವರ್ತನೆಯ ಬಗ್ಗೆ ಕ್ಷಮೆ ಕೇಳಿದ್ದು ತಕ್ಷಣವೇ ಅವರ ಪಿಎನ್‌ಆರ್‌ ಸಂಖ್ಯೆ ಹಾಗೂ ಪ್ರಯಾಣ ವಿವರಗಳನ್ನು ಕಳುಹಿಸುವಂತೆ ಸೂಚಿಸಿದೆ ಹಾಗೂ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!