ಬಿಜೆಪಿ ಸೇರಿಕೊಂಡ ನಟಿ ಪೂಜಾ ರಮೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಿಸ್ ಇಂಡಿಯಾ ವಿಜೇತೆ, ಚಿಕ್ಕಮಗಳೂರು ಮೂಲದ ನಟಿ ಪೂಜಾ ರಮೇಶ್ ಬಿಜೆಪಿ (BJP) ಸೇರಿಕೊಂಡಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದ್ದಾರೆ.

ಸದ್ಯ ಪೂಜಾ ರಮೇಶ್ ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಇದರ ಮಧ್ಯೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡು ರಾಜಕೀಯ ಅಂಗಳಕ್ಕೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಾಯಚೂರು ಕ್ಷೇತ್ರದಿಂದ ಎಎಪಿನಿಂದ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತು ಅನುಭವ ಪಡೆದುಕೊಂಡಿದ್ದರು. ಸದ್ಯ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕನ್ನಡದ ಅನೇಕ ನಟ ನಟಿಯರು ಈಗಾಗಲೇ ವಿವಿಧ ಪಕ್ಷಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚುನಾವಣೆ ಪ್ರಚಾರದಲ್ಲೂ ಅವರು ತೊಡಗಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!