ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಿಮಿಕ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿರುವ ನಟಿ ಪೂನಂ ಪಾಂಡೆಗೆ ನೆಟ್ಟಿಗರು ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ!
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಕಾಟ್ ಪೂನಂ ಪಾಂಡೆ’ ಟ್ರೆಂಡ್ ಶುರು ಮಾಡಿದ್ದಾರೆ. ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಈಗ ಆಗ್ರಹಗಳು ವ್ಯಾಪಕವಾಗಿ ಕೇಳಿಬರುತ್ತಿದೆ.
32 ವರ್ಷದ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ಗೆ ಬಲಿಯಾಗಿದ್ದಾರೆ ಎಂದು ಆಕೆಯ ಮ್ಯಾನೇಜರ್ ನಿನ್ನೆಯಷ್ಟೇ ಪೂನಂ ನ ಅಧಿಕೃತ ಇನ್ಸ್ಟಾ ಪೇಜ್ನಲ್ಲಿ ಹಾಕಿ ಕ್ಯಾನ್ಸರ್ ರೋಗಿಗಳ ಸಹಿತ ಆಕೆಯ ‘ಅಭಿಮಾನಿ’ಗಳಿಗೆ ಆಘಾತ ನೀಡಿದ್ದರು. ಬಳಿಕ ಇದೊಂದು ಜಾಗೃತಿ ಮೂಡಿಸುವ ಪ್ರಯತ್ನ ಎಂದು ಖುದ್ದು ನಟಿಯೇ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಹೆಸರಿನಲ್ಲಿ ಪೂನಂ ನಡೆಸಿರುವ ‘ಸಾವಿನ ನಾಟಕ’ ನಟಿಗೆ ಭಾರಿಯಾಗಿ ಪರಿಣಮಿಸಿದೆ.