ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ ನಟಿ ಪ್ರೇಮಾ ಅವಕಾಶ ಸಿಗದೇ ವಾಪಾಸ್ ಆಗಿದ್ದಾರೆ. ನಿವಾಸಕ್ಕೆ ಬಂದು ಡಿಕೆಶಿ ಅವರನ್ನು ಭೇಟಿಯಾಗಬೇಕು ಎಂದು ಹೇಳಿದ ನಟಿಗೆ ಭದ್ರತಾ ಸಿಬ್ಬಂದಿ ಒಳಪ್ರವೇಶಕ್ಕೆ ಅವಕಾಶ ನೀಡಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ನಟಿ ಪ್ರೇಮಾ ಅವರನ್ನು ಮನೆ ಒಳಗೆ ಬರಲು ಬಿಡದೆ, ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕಾದರೆ ಕೃಷ್ಣಾ ಕಚೇರಿಗೆ ಆಗಮಿಸುವಂತೆ ನಟಿ ಪ್ರೇಮಾ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಿಎಂ ಡಿಕೆಶಿ ಏನೇ ಅಹವಾಲು, ಭೇಟಿ ಇದ್ದರೂ ನಮ್ಮ ಮನೆಗೆ ಬರಬೇಡಿ, ಬದಲಾಗಿ ಅಧಿಕೃತ ಗೃಹ ಕೃಷ್ಣಾಗೆ ಬನ್ನಿ ಎಂದು ಹೇಳಿಕೊಂಡಿದ್ದರು. ಆದರೆ ನಟಿ ಪ್ರೇಮಾ ಖಾಸಗಿ ವಿಷಯವಾಗಿ ಮನೆಗೆ ಆಗಮಿಸಿ ಬೇಸರದಲ್ಲಿ ವಾಪಾಸ್ ಹೋಗಿದ್ದಾರೆ.



