ಥ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ‘ಮಹಾದೇವ’ನನ್ನು ಅರ್ಪಿಸಿದ ನಟಿ ಪ್ರಿಯಾಮಣಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಚ್ಚಿ ದೇಗುಲಕ್ಕೆ ’ಯಾಂತ್ರಿಕ ಆನೆ’ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ!
ಕೊಚ್ಚಿಯಲ್ಲಿರುವ ಥ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಬಹುಭಾಷ ನಟಿ ಪ್ರಿಯಾಮಣಿ ‘ಆನೆ’ ದಾನವಾಗಿ ನೀಡಿದ್ದಾರೆ.

ಇಲ್ಲಿ ಜೀವಂತ ಆನೆ ಬಳಸಿಕೊಳ್ಳಲು ಅವಕಾಶ ಇಲ್ಲ. ಹೀಗಾಗಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ ಜತೆಗೂಡಿ ಅವರು ಮಾಮೂಲಿ ಆನೆಯ ಗಾತ್ರದ್ದೇ ರೋಬೋಟ್ ಆನೆಯನ್ನು ಅರ್ಪಿಸಿದ್ದಾರೆ.

ಈ ‘ಆನೆ’ಗೆ ಮಹಾದೇವನ್ ಎಂದು ನಾಮಕರಣ ಮಾಡಲಾಗಿದೆ. ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ದೇವಸ್ಥಾನದಲ್ಲಿ ಸಮಾರಂಭಗಳನ್ನು ನಡೆಸಲು ಈ ಯಾಂತ್ರಿಕ ಆನೆಯನ್ನು ಬಳಸಲಾಗುತ್ತದೆ ಎಂದು ಆಡಳಿತ ತಿಳಿಸಿದೆ.

ಕಳೆದ ವರ್ಷ ತ್ರಿಶೂರ್‌ನ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದ ಅಧಿಕಾರಿಗಳು ದೇವಾಲಯದ ಆಚರಣೆಗಳಿಗೆ ರೋಬೋಟಿಕ್ ಆನೆಯನ್ನು ಪರಿಚಯಿಸಿದ್ದರು. ನಟಿ ನೀಡಿರುವ ಆನೆ ಕೇರಳದ ಎರಡನೇ ರೋಬೋಟಿಕ್ ಆನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!