ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರುಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ ದಂಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಕುಟುಂಬ ಸಮೇತ ಅಯೋಧ್ಯೆಗೆ (Ayodhya) ಭೇಟಿ ನೀಡಿದ್ದಾರೆ.

ಪತಿ ನಿಕ್ ಜೋನಸ್ ಮತ್ತು ಮಗಳ ಜೊತೆ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಭಾರತಕ್ಕೆ ಬಂದು ಬಿಡುವು ಮಾಡಿಕೊಂಡು ಅಯೋಧ್ಯೆಗೆ ಪ್ರಿಯಾಂಕಾ ಭೇಟಿ ಕೊಟ್ಟಿರೋದು ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಕಳೆದ ವರ್ಷ ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್‌ಗೆ ಹಾಜರಿ ಹಾಕಿದ ಬಳಿಕ ಇದೀಗ ಭಾರತಕ್ಕೆ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ. ಪ್ರಿಯಾಂಕಾ ತವರು ಮನೆ ಮುಂಬೈನಲ್ಲಿ (Mumbai) ಸಮಯ ಕಳೆಯುತ್ತಿದ್ದಾರೆ. ಅಂಬಾನಿ ಮನೆ ಪಾರ್ಟಿ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!