ಶೂಟಿಂಗ್ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕೊರಳಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ದಿ ಬ್ಲಫ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಕೊರಳಿಗೆ ಗಾಯವಾಗಿದೆ.

ಬುಧವಾರ ಬೆಳಿಗ್ಗೆ, ಅವರು ಇನ್ಸ್ಟಾಗ್ರಾಮ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಪ್ರಿಯಾಂಕಾ ತನ್ನ ಗಂಟಲಿನ ಕೆಳಗಿನ ಗಾಯದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೋಟೋಗೆ” “Oh the professional hazards on my jobs” ಎಂದು ಪ್ರಿಯಾಂಕಾ ಶೀರ್ಷಿಕೆ ನೀಡಿದ್ದಾರೆ.

 ಪ್ರಿಯಾಂಕಾ ಸದ್ಯ ಮುಂಬರುವ ಚಿತ್ರ ‘ದಿ ಬ್ಲಫ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಫ್ರಾಂಕ್ ಇ. ಫ್ಲವರ್ಸ್ ನಿರ್ದೇಶನದ ಈ ಚಿತ್ರವು 19 ನೇ ಶತಮಾನದ ಕೆರಿಬಿಯನ್ ನಲ್ಲಿದೆ . ರುಸ್ಸೊ ಸಹೋದರರ ಎಜಿಬಿಒ ಸ್ಟುಡಿಯೋಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವು ಆಯಕ್ಷನ್ ಸಸ್ಪೆನ್ಸ್ ಸಿನಿಮವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!