ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಇಂದು ನಟಿ ರಚಿತಾರಾಮ್ ಅವರು ಜೈಲಿಗೆ ಭೇಟಿ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಜಿಲ್ಲೆನಲ್ಲಿ ನಟ ದರ್ಶನ್ ಜೈಲು ವಾಸ ಅನುಭವಿಸುತ್ತಿದ್ದಾರೆ.ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರ ಹಾಗೂ ಸಹೋದರ ಸೇರಿದಂತೆ ಚಿತ್ರರಂಗದ ಹಲವು ನಟ ನಟಿಯರು ನಟ ದರ್ಶನ್ ಅವರನ್ನು ಇತ್ತೀಚಿಗೆ ಭೇಟಿ ಮಾಡಿದ್ದರು.
ಇದೀಗ ನಟಿ ರಚಿತಾ ರಾಮ್ ಅವರು ಕೂಡ ನಟ ದರ್ಶನ್ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಆಪ್ತಟ ಸಚ್ಚಿದಾನಂದ ಜೊತೆಗೆ ನಟಿ ರಚಿತಾ ರಾಮ್ ಆಗಮಿಸಿದ್ದಾರೆ.