SHOCKING | ನಟಿ ರಮ್ಯಾಗೆ ಹೃದಯಾಘಾತ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಇದೊಂದು ಫೇಕ್ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿಗಳು ಹರಡಿದ್ದು, ವೈರಲ್ ಆಗಿದೆ. ಆದರೆ ಈ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದ್ದು, ರಮ್ಯಾ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಸುದ್ದಿ ವೈರಲ್ ಆಗುತ್ತಿದ್ದಂತೆಯೇ ರಮ್ಯಾ ಪ್ರೀತಿಪಾತ್ರರು ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ರಮ್ಯಾ ದನಿ ಕೇಳಿ ಖುಷಿಯಾಗಿದ್ದು, ರಮ್ಯಾ ಬದುಕಿದ್ದಾರೆ, ಅವರಿಗೇನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರ ಬಗ್ಗೆಯೂ ಸುಳ್ಳು ಸುದ್ದಿ ಹಬ್ಬಬಾರದು, ಅದರಲ್ಲಿಯೂ ನಿಧನರಾಗಿದ್ದಾರೆ ಎನ್ನುವ ಸುದ್ದಿಗಳನ್ನು ಹಬ್ಬಲೇಬಾರದು. ಸದ್ಯ ರಮ್ಯಾ ಯುರೋಪ್ ಪ್ರವಾಸವನ್ನು ಎಂಜಾಯ್ ಮಾಡ್ತಿದ್ದಾರೆ

ಇತ್ತೀಚೆಗಷ್ಟೇ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿದೇಶ ಪ್ರವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸ್ಪಂದನಾ ಹೆಸರನ್ನು ದಿವ್ಯ ಸ್ಪಂದನಾ ಎಂದು ತಿಳಿದು ಸುದ್ದಿ ಪ್ರಕಟವಾಗಿದೆ ಎನ್ನಲಾಗಿದೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!