ಹೊಸದಿಗಂತ ಡಿಜಿಟಲ್ ಡೆಸ್ಕ್:
ರನ್ಯಾ ರಾವ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಡಿಆರ್‌ಐ ಅಧಿಕಾರಿಗಳು, ನಟಿಯ ಜೊತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
ರನ್ಯಾಗೆ ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು, ಸ್ವಾಮೀಜಿ, ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ನಂಟು ಹೊಂದಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದೀಗ ನಟಿಯ ಸ್ನೇಹಿತ ತರುಣ್ ರಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಆತ ತೆಲುಗು ನಟ ಎಂಬುದು ಬೆಳಕಿಗೆ ಬಂದಿದೆ. ಸಿನಿಮಾ ನಟನಾಗಲು ತರುಣ್ ಕೊಂಡೂರು ರಾಜ್ ಹೆಸರನ್ನು ವಿರಾಟ್ ಕೊಂಡೂರು ರಾಜ್ ಅಂತ ಬದಲಾಯಿಸಿಕೊಂಡಿದ್ದ. ವಿರಾಟ್ ಕೊಂಡೂರು ರಾಜ್ ಅಂತ ಹೆಸರು ಬದಲಿಸಿಕೊಂಡು ಟಾಲಿವುಡ್ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದ.
ಸದ್ಯ ಡಿಆರ್ ಐ ಕಸ್ಡಡಿಯಲ್ಲಿರೋ ವಿರಾಟ್ ಕೊಂಡೂರು ರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.