ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಭಾಷೆಗಳಲ್ಲಿ ತನ್ನ ಛಾಪು ಮಾಡಿಸಿರುವ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಭಿಮಾನಿಗೆ ರಶ್ಮಿಕಾ ಪ್ರಪೋಸ್ ಮಾಡಿದ್ದು, ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
`ಮಿಷನ್ ಮಜ್ನು’ (Mission Majnu) ರಿಲೀಸ್ ಬಳಿಕ ಮತ್ತಷ್ಟು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ರಶ್ಮಿಕಾ ಬಂದಿದ್ದರು ಈ ವೇಳೆ ಅಭಿಮಾನಿಗಳು ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇನ್ನೊಬ್ಬ ಅಭಿಮಾನಿ, ರಶ್ಮಿಕಾ ಬಳಿ ಬಂದು ತೆಲುಗಿನಲ್ಲಿ ಪ್ರಪೋಸ್ ಮಾಡುವುದು ಹೇಗೆ ಎಂದು ಕೇಳಿದ್ದಾರೆ. ಹಾಯ್ ಹಾಗಾದರೆ ಯಾರೋ ಹುಡುಗಿ ಇದ್ದಾರೆ ಎಂದಿದ್ದಾರೆ. ಬಳಿಕ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಗೆ ರಶ್ಮಿಕಾ ಹೇಳಿದ್ದಾರೆ. ಅಭಿಮಾನಿ ಕೂಡ ಸೇಮ್ ಟು ಯು ಎಂದಿದ್ದಾರೆ.
ಇದೀಗ ರಶ್ಮಿಕಾ ಅಭಿಮಾನಿಗೆ ಪ್ರಪೋಸ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇನ್ನೂ ಈ ವೀಡಿಯೋವನ್ನ ವಿಜಯ್ ದೇವರಕೊಂಡಗೆ (Vijay Devarakonda) ಟ್ಯಾಗ್ ಮಾಡಿ ನಿಮ್ಮ ಹುಡುಗಿ ಇಲ್ಲಿ ಯಾರಿಗೋ ಪ್ರಪೋಸ್ ಮಾಡ್ತಿದ್ದಾರೆ ನೋಡಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.