ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಹಸೆಮಣೆ ಏರಿರುವ ನಟಿ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ರಶ್ಮಿಕಾಗೆ ತುಂಬಾ ಇಷ್ಟವಾದ, ಮನಸ್ಸಿಗೆ ಹತ್ತಿರವಾದ ದಿ ಗರ್ಲ್‌ಫ್ರೆಂಡ್ ಸಿನಿಮಾಗೆ ಬಿಗ್ ಅವಾರ್ಡ್ ಸಿಕ್ಕಿದೆ.
ತೆಲಂಗಾಣ ಸರ್ಕಾರ ‘2025ರ ಗದ್ದರ್ ಫಿಲ್ಮ್ ಅವಾರ್ಡ್’ ಸಿಕ್ಕಿದೆ. ‘ಗರ್ಲ್‌ಫ್ರೆಂಡ್’ ಚಿತ್ರದ ನಟನೆಗೆ ಈ ಅವಾರ್ಡ್ ಸಿಕ್ಕಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಗರ್ಲ್‌ಫ್ರೆಂಡ್’ ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ನಟಿ ಸ್ಟೇಟಸ್ ಅಪ್ಡೇಟ್ ಮಾಡಿದ್ದು, ನಂಬೋಕೆ ಆಗ್ತಿಲ್ಲ ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾ ನವೆಂಬರ್ 7ರಂದು ರಿಲೀಸ್ ಆಯಿತು. ಈ ಚಿತ್ರ ಗಮನ ಸೆಳೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.



