ಕಿರುತೆರೆಗೆ ಎಂಟ್ರಿ ಕೊಟ್ಟ ʻಸ್ಪರ್ಶʼ ಖ್ಯಾತಿಯ ನಟಿ ರೇಖಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಟ ಕಿಚ್ಚ ಸುದೀಪ್‌ ಜತೆ ʻಸ್ಪರ್ಶʼ ಸಿನಿಮಾದ ಮೂಲಕ ಸಾಕಷ್ಟು ಪರಿಚಿತರಾದ ಸ್ಯಾಂಡಲ್‌ವುಡ್‌ ನಟಿ ರೇಖಾ ಇದೀಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ʻತ್ರಿಪುರ ಸುಂದರಿʼ ಎನ್ನುವ ಧಾರಾವಾಹಿ ಮೂಲಕ ರೇಖಾ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ತ್ರಿಪುರ ಸುಂದರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಜನವರಿ 2 ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಶಿವರಾಜ್‌ಕುಮಾರ್‌ ಅಭಿನಯದ ʻವೇದʼ ಸಿನಿಮಾದಲ್ಲಿಯೂ ನಟಿಸಿರುವ ರೇಖಾ ಅವರು ಇದೀಗ ಧಾರಾವಾಹಿಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!