ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಲವ್ ಬರ್ಡ್ಸ್ ರಿಚಾ ಚಡ್ಡಾ ಮತ್ತು ಅಲಿ ಫಜಲ್ ವೈವಾಹಿಕ ಜೀವನಕ್ಕೆ ಹೆಜ್ಜೆಯಿಡಲು ಸಜ್ಜಾಗಿದ್ದು, ಅಕ್ಟೋಬರ್ 4ಕ್ಕೆ ಹಸೆಮಣೆ ಏರಲಿದೆ. ಈ ಜೋಡಿಯ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಲ್ಪನಿಕ ಆಮಂತ್ರಣ ಪತ್ರ ವೈರಲ್ ಆಗ್ತಿದೆ.
ರಿಚಾ ಮತ್ತು ಅಲಿ ಅವರ ಕಾಲ್ಪನಿಕ ವೈರಲ್ ಮದುವೆ ಆಮಂತ್ರಣವು, ಈ ಜೋಡಿ ಸೈಕಲ್ ಸವಾರಿ ಮಾಡುವ ಚಿತ್ರವನ್ನು ಒಳಗೊಂಡಿದೆ. ಮ್ಯಾಚ್‌ಬಾಕ್ಸ್ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಆಹ್ವಾನದ ಮೇಲೆ “ಕಪಲ್ ಮ್ಯಾಚೆಸ್” ಎಂದು ಬರೆಯಲಾಗಿದೆ.
ಅಕ್ಟೋಬರ್ 4 ರಂದು ಮುಂಬೈನಲ್ಲಿ ಈ ಮದುವೆ ನಡೆಯಲಿದೆ. ಜೋಡಿ ತಮ್ಮ ಕುಟುಂಬ, ಸ್ನೇಹಿತರು ಮತ್ತು ಉದ್ಯಮದ ಗೆಳೆಯರಿಗಾಗಿ ಒಂದು ದಿನದ ನಂತರ ಮದುವೆಯ ಆರತಕ್ಷತೆ ಆಯೋಜಿಸಲಿದ್ದಾರೆ ಎಂದು ನಟಿ ರಿಚಾ ಚಡ್ಡಾ ಅವರ ಬಲ್ಲ ಮೂಲಗಳು ತಿಳಿಸಿವೆ.
ಕಾಕ್ಟೈಲ್, ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮಗಳು ಹೊಸ ದೆಹಲಿಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿರುವ ಇವರಿಬ್ಬರು 2020ರ ಏಪ್ರಿಲ್‌ನಲ್ಲಿ ವಿವಾಹವಾಗಬೇಕಿತ್ತು. ಆದರೆ, ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಮದುವೆಯನ್ನು ಎರಡು ಬಾರಿ ಮುಂದೂಡಿದ್ದರು.