ಬ್ರೈನ್ ಹ್ಯಾಮ್ರೇಜ್‌ನಿಂದ ನಟಿ ರಿಷ್ತಾ ಲಬೋನಿ ಶಿಮಾನಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಾಂಗ್ಲಾದೇಶದ ಯುವ ನಟಿ ರಿಷ್ತಾ ಲಬೋನಿ ಶಿಮಾನಾ (Rishta Laboni Shimana) ವಿಧಿವಶರಾಗಿದ್ದಾರೆ. ಮಾಡೆಲ್ ಆಗಿಯೂ ಗಮನ ಸೆಳೆದಿದ್ದ 39ನೇ ವಯಸ್ಸಿನ ರಿಷ್ತಾ ಬ್ರೈನ್ ಹ್ಯಾಮ್ರೇಜ್‌ನಿಂದ ಆಸ್ಪತ್ರೆ ದಾಖಲಾಗಿದ್ದರು. ಕಳೆದ 14 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಿಷ್ತಾ ಜೂನ್ 5ರಂದು ನಿಧನರಾಗಿದ್ದಾರೆ.

ನಟಿಯ ಸಾವಿನ ಸುದ್ದಿಯನ್ನು ಸಹೋದರ ಇಜಾಜ್ ಬಿನ್ ಮತ್ತು ಮಾಜಿ ಪತಿ ಪರ್ವೇಜ್ ಸಜ್ಜದ್ ಖಚಿತಪಡಿಸಿದ್ದಾರೆ.

ಮೇ.21ರಂದು ಬ್ರೈನ್ ಹ್ಯಾಮ್ರೇಜ್ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಿಷ್ತಾರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಶೇಕ್ ಮುಜೀಬ್ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಟಿ ಮೃತಪಟ್ಟಿದ್ದಾರೆ. ಮೇ.21ರಂದು ನಟಿ ರಿಷ್ತಾರ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಪ್ರಜ್ಞೆ ತಪ್ಪಿದ ನಟಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ತಕ್ಷಣ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ನಟಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ಮೇ 25ರಂದು ನ್ಯೂರೋಸೈನ್ಸ್ ಆಸ್ಪತ್ರೆಗೆ ದಾಖಲಿಸಿ ಮೆದುಳಿನ ಸರ್ಜರಿ ಕೂಡ ಮಾಡಲಾಗಿತ್ತು. ಸರ್ಜರಿ ಬಳಿಕ ನಟಿಯ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಶೇಕ್ ಮುಜೀಬ್ ಮೆಡಿಕಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮೇ.29ರಿಂದ ವೆಂಟಿಲೇಟರ್ ನೆರವಿನಲ್ಲಿದ್ದ ನಟಿ ರಿಷ್ತಾ ಜೂನ್‌ 5ರಂದು ನಿಧನರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!