ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ನಪೂರ್ಣ ದೇವಸ್ಥಾನಕ್ಕೆ ಸಾಯಿ ಪಲ್ಲವಿ ಅವರು ಇಂದು ಭೇಟಿ ನೀಡಿದ್ದಾರೆ.
ಈ ವರ್ಷ ‘ಅಮರನ್’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಗೆಲುವಿನ ಖುಷಿಯಲ್ಲಿ ಸಾಯಿ ಪಲ್ಲವಿ ತೇಲುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ. ‘ಅಮರನ್’ ಯಶಸ್ಸಿನ ಬಳಿಕ ಸಾಯಿ ಪಲ್ಲವಿ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಯಶಸ್ಸಿನ ಬಳಿಕ ಇದೀಗ ಸಾಯಿ ಪಲ್ಲವಿ ದೇವಿಯ ದರುಶನ ಪಡೆದಿದ್ದಾರೆ.
ಬಾಲಿವುಡ್ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ರಾಮನಾಗಿ ಕಾಣಿಸಿಕೊಳ್ಳುತ್ತಿರುವ ರಣಬೀರ್ ಕಪೂರ್ಗೆ ಸಾಯಿ ಪಲ್ಲವಿ ಜೋಡಿ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.