ಶೂಟಿಂಗ್‌ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಅಪಘಾತ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ರೀಮ್ ಸಿನಿಮಾದ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆಗೆ ಪೆಟ್ಟು ಬಿದ್ದಿದೆ.
ಸಿನಿಮಾದ ಫೈಟಿಂಗ್ ಸೀಕ್ವೆನ್ಸ್ ನ ಚಿತ್ರೀಕರಣ ಸಂದರ್ಭದಲ್ಲಿ ಈ ಅವಘಡ ನಡೆದಿದ್ದು, ಆಕ್ಷನ್ ಮಾಡುವಾಗ ಸಂಯುಕ್ತ ಬಲ ಭಾಗದ ಕಾಲಿಗೆ ಪೆಟ್ಟಾಗಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸಂಯುಕ್ತಾ ಹೆಗ್ಡೆಗೆ ಬೆಂಗಳೂರಿನ ಕಣ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಭಿಷೇಕ್ ಬಸಂತ್ ನಿರ್ದೇಶನದ, ನಿರ್ಮಾಪಕ ಡಿ ಕೆ. ದೇವೇಂದ್ರ ನಿರ್ಮಾಣದ ಕ್ರೀಮ್ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!