ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟಿ ಅನಿಕಾ ವಿಕ್ರಮನ್ ಬಾಯ್‌ಫ್ರೆಂಡ್‌ನಿಂದ ಹಲ್ಲೆಗೊಳಗಾಗಿದ್ದು, ಕೆಲವು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂಕಿತ್ ಪಿಳ್ಳೆಯನ್ನು ನಾನು ಪ್ರೀತಿಸುತ್ತಿದ್ದೆ, ಆದರೆ ಅವನದ್ದು ವಿಷಕಾರಿ ಮನಸ್ಥಿತಿ. ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೇನೆ. ಪ್ರತಿ ಬಾರಿ ಈ ರೀತಿ ಹಲ್ಲೆ, ದೈಹಿಕವಾಗಿ ನೋವು ಕೊಟ್ಟಾಗ ಕ್ಷಮಿಸಿದ್ದೇನೆ. ಇನ್ನು ಆಗುವುದಿಲ್ಲ ಈತನಿಗೆ ಶಿಕ್ಷೆ ಆಗಬೇಕು ಎಂದು ಅನಿಕಾ ಹೇಳಿಕೊಂಡಿದ್ದಾರೆ.
ಎರಡನೇ ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಮೊದಲನೆ ಬಾರಿ ಹೊಡೆದಾಗ ಪೊಲೀಸರಿಗೆ ದೂರು ನೀಡಿದ್ದೆ. ಕಾಲಿಗೆ ಬಿದ್ದು ಅತ್ತು ಆತ ಕ್ಷಮೆ ಕೇಳಿದ್ದ. ಹಾಗಾಗಿ ನಾನು ಅವನನ್ನು ಕ್ಷಮಿಸಿದ್ದೆ. ಆದರೆ ಇದು ಅಲ್ಲಿಗೇ ಮುಗಿದಿಲ್ಲ ಎಂದು ಅನಿಕಾ ಹೇಳಿದ್ದಾರೆ.
ನಾನು ಬ್ರೇಕಪ್ ಮಾಡಿಕೊಂಡಿದ್ದೇನೆ ಆದರೆ ಆತ ಬ್ರೇಕಪ್‌ಗೆ ಒಪ್ಪುತ್ತಿಲ್ಲ, ನನ್ನ ಕುಟುಂಬದವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಮೊಬೈಲ್ ಒಡೆದಿದ್ದಾನೆ. ನನ್ನ ಮೊಬೈಲ್ ಅವನ ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿಕೊಂಡಿದ್ದಾನೆ ನಾನಾ ರೀತಿಯಲ್ಲಿ ಹಿಂಸೆ ನೀಡಿದ್ದಾನೆ ಎಂದು ಅನಿಕಾ ಹೇಳಿದ್ದಾರೆ.
https://www.instagram.com/p/CpZ9q3sPYvr/?utm_source=ig_web_copy_link