Monday, October 3, 2022

Latest Posts

ಶೂಟಿಂಗ್ ನಲ್ಲಿ ನಟಿ ಶಿಲ್ಪಾ ಶೆಟ್ಟಿಗೆ ಗಾಯ: 6 ವಾರ ವಿಶ್ರಾಂತಿಗೆ ವೈದ್ಯರ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್​’ ವೆಬ್ ಸೀರಿಸ್​ ಶೂಟಿಂಗ್ ನಡೆಯುತ್ತಿದ್ದಾಗ ನಟಿ ಶಿಲ್ಪಾ ಶೆಟ್ಟಿ ಅವರ ಕಾಲಿಗೆ ಗಾಯವಾಗಿದೆ.
ಈ ಕೂತಿತು ಮಾಹಿತಿ ಹಂಚಿಕೊಂಡಿರುವ ಅವರು, ಮುಂದಿನ ಆರು ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಅಪಾಯಕಾರಿ ಆ್ಯಕ್ಷನ್​ ಶೂಟಿಂಗ್​ ನಡೆಯುತ್ತಿದ್ದಾಗ ಅವಘಡ ಸಂಭವಿಸಿದೆ. ಶೀಘ್ರವಾಗಿ ಶೂಟಿಂಗ್​​ಗೆ ಮರಳಲಿದ್ದೇನೆ, ಅಭಿಮಾನಿಗಳ ಹಾರೈಕೆ ಇರಲಿ ಎಂದು ಹೇಳಿದ್ದಾರೆ.
ಇಂಡಿಯನ್​ ಪೊಲೀಸ್ ಫೋರ್ಸ್​​ನಲ್ಲಿ ತಾರಾಗಣದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್ ಒಬೆರಾಯ್ ಮತ್ತು ಇಶಾ ತಲ್ವಾರ್ ಇದ್ದಾರೆ. ಈ ವೆಬ್ ಸರಣಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಶಿಲ್ಪಾ ಶೆಟ್ಟಿ ಅವರಿಗಿದು ಚೊಚ್ಚಲ OTT ಸರಣಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!