CINE | ಬಾಲಿವುಡ್‌ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡ ನಟಿ ಶ್ರುತಿ ಪ್ರಕಾಶ್‌, ಇದೊಂದು ದೆವ್ವದ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ಕಿರುತೆರೆಯಿಂದ ಆಗಮಿಸಿ ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ ಶ್ರುತಿ ಪ್ರಕಾಶ್‌ ಇದೀಗ ಮತ್ತೆ ಬಾಲಿವುಡ್‌ಗೆ ಹಾರಲಿದ್ದಾರೆ.
ಬಾಲಿವುಡ್‌ನಲ್ಲಿ ಶ್ರುತಿ ಮೊದಲ ಸಿನಿಮಾ ಇದಾಗಿದ್ದು, ವಿಕ್ರಮ್‌ ಭಟ್‌ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿ ಮಿಂಚಲಿದ್ದಾರೆ.

ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ವಿಕ್ರಮ್ ಭಟ್  ಅವರು ಹಾಂಟೆಡ್ 2 ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಆನಂದ್ ಪಂಡಿತ್  ನಿರ್ಮಾಣ ಮಾಡಿದ್ದಾರೆ. ಇದು ಹಾಂಟೆಡ್ ಚಿತ್ರದ ಸೀಕ್ವೆಲ್ ಆಗಿದೆ.

ಹಾಂಟೆಡ್ 2  ಸಿನಿಮಾದಲ್ಲಿ ಮಿಮೋಹ್ ಚಕ್ರವರ್ತಿಗೆ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಶ್ರುತಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದ್ದು, ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!