ಹೊಸದಿಗಂತ ಡಿಜಿಟಲ್ ಡೆಸ್ಕ್:
ವಜ್ರಕಾಯ ಸಿನಿಮಾ ಖ್ಯಾತಿಯ ನಟಿ ಶುಭ್ರಾ ಅಯ್ಯಪ್ಪ ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಶಿವರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ಕೂರ್ಗ್ ಬ್ಯೂಟಿ ಶುಭ್ರಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದರು. ಇದೀಗ ಉದ್ಯಮಿ ವಿಶಾಲ್ ಜೊತೆ ಮದುವೆಗೆ ಸಿದ್ಧರಾಗಿದ್ದಾರೆ.
ಸತತ 6 ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಇದೀಗ ಜನವರಿ 18ರಂದು ಫ್ಯಾಮಿಲಿ ಜೊತೆ ಕೂರ್ಗ್‌ನಲ್ಲಿ ವಿಶಾಲ್ ಮತ್ತು ಶುಭ್ರಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇನ್ನೂ ಜ.20 ಮತ್ತು 21ರಂದು ಮೈಸೂರಿನಲ್ಲಿ ಸಿನಿಮಾ ರಂಗದ ಸ್ನೇಹಿತರಿಗೆ, ಗಣ್ಯರಿಗೆ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.