ನಟಿ ಸೋನಾಕ್ಷಿ ತಂಡಕ್ಕೆ ಎದುರಾಗಿದೆ ಬಂಧನದ ಭೀತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹ ಅವರ ತಂಡ ಕಾನೂನು ಸಂಕಷ್ಟ ಎದುರಿಸುತ್ತಿದೆ. ವಂಚನೆ ಪ್ರಕರಣವೊಂದರಲ್ಲಿ ಅವರ ತಂಡದ ವಿರುದ್ಧ ಮೊರದಾಬಾದ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಸೊನಾಕ್ಷಿ ಸಿನ್ಹ ಪ್ರಸ್ತುತ ಈ ಪ್ರಕರಣದಿಂದ ತಾತ್ಕಾಲಿಕ ರಿಲೀಫ್ ಪಡೆದುಕೊಂಡಿದ್ದಾರಾದರೂ ವಿಚಾರಣೆ ಮುಂದುವರೆದಂತೆ ಅವರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

೨೦೧೮ರಲ್ಲಿ ಸೊನಾಕ್ಷಿ ಸಿನ್ಹ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದು, ಪಾಲ್ಗೊಳ್ಳಲು ಅವರು ಹಣ ಪಡೆದಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಅವರು ಆಗಮಿಸಲು ಅಸಾಧ್ಯವಾಗಿದ್ದರಿಂದ ಕಾರ್ಯಕ್ರಮ ಆಯೋಜಿಸಿದವರಿಗೆ ಭಾರೀ ನಷ್ಟವಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಹಾಜರಾಗಲು ಅವರು ಪಡೆದ ಹಣವನ್ನು ಹಿಂದಿರುಗಿಸಿರಲಿಲ್ಲ. ಇದರಿಂದಾಗಿ ಆಯೋಜಕರು ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ, ಸೊನಾಕ್ಷಿ ಅವರ ಮೆನೇಜರ್‌ಗಳು ಹಾಗೂ ಅವರ ತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!