ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಡಿಕೆಯಿರುವಾಗಲೇ ವಸೂಲಿ ಮಾಡಬೇಕೆನ್ನುವ ಸೂತ್ರ ಪಾಲಿಸುತ್ತಿದ್ದಾರೆ ಸಿನಿಮಾ ನಟ ನಟಿಯರು. ಈ ರೀತಿ ಸ್ಟಾರ್ ಡಮ್ ಇರುವ ಹೀರೋ, ಹೀರೋಯಿನ್ ಗಳು ತಮ್ಮ ಬೇಡಿಕೆ ಮತ್ತು ಕ್ರೇಜ್ ಅನ್ನು ಕ್ಯಾಶ್ ಮಾಡಿಕೊಳ್ಳಲು ತಮ್ಮ ಸಂಭಾವನೆಯನ್ನು ಸಾಕಷ್ಟು ಹೆಚ್ಚಿಸಿ ನಿರ್ಮಾಪಕರಿಂದ ಭರ್ಜರಿ ಚೆಕ್ ವಸೂಲಿ ಮಾಡುತ್ತಾರೆ. ಇದೀಗ ಸ್ಯಾಂಡಲ್ವುಡ್ ಸುಂದರಿಯೊಬ್ಬರು ಈ ತಂತ್ರ ಅನುಸರಿಸುತ್ತಿದ್ದಾರೆ.
ಕಿಸ್, ಭರಾಟೆ, ಬೈ ಟು ಲವ್ ಸಿನಿಮಾಗಳ ಮೂಲಕ ಕನ್ನಡದಲ್ಲಿ ರಂಜಿಸಿದ ಈಕೆ ಪರಭಾಷಾ ನಾಯಕರಿಗೂ ನಾಯಕಿಯಾಗಿ ನಟಿಸಿದ್ದಾಳೆ. ಪೆಳ್ಳಿಸಂದಡಿ ಸಿನಿಮಾ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಯಂಗ್ ಬ್ಯೂಟಿ ಶ್ರೀಲೀಲಾ ತಮ್ಮ ಸೌಂದರ್ಯದಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಆ ಸಿನಿಮಾದಲ್ಲಿ ಈಕೆ ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಇತರೆ ಯಂಗ್ ಹೀರೋಗಳು ಕೂಡ ನಾಯಕಿಯಾಗಿ ಆಫರ್ ನೀಡುತ್ತಿದ್ದು, ಸಾಲು ಸಾಲು ಚಿತ್ರಗಳು ಬರುತ್ತಿವೆ. ರವಿತೇಜ ಜೊತೆ ‘ಧಮಾಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಹಾಗೂ ಹಾಡುಗಳಲ್ಲಿ ಶ್ರೀಲೀಲಾ ಹೆಚ್ಚು ಸುಂದರವಾಗಿ ಕಾಣುತ್ತಿರುವುದರಿಂದ ಇತರೆ ನಿರ್ದೇಶಕರು ಕೂಡ ಅವರನ್ನೇ ತಮ್ಮ ಸಿನಿಮಾದಲ್ಲಿ ನಾಯಕಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಬ್ಬ ಯುವ ನಾಯಕ ರಾಮ್ ಪೋತಿನೇನಿ ಅವರ ಇತ್ತೀಚಿನ ಚಿತ್ರದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ.
ಸತತ ಆಫರ್ಗಳಿಂದಾಗಿ ಶ್ರೀಲೀಲಾ ತಮ್ಮ ಸಂಭಾವನೆಯನ್ನು ಸಾಕಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನುತ್ತವೆ ಉದ್ಯಮದ ಮೂಲಗಳು. ಧಮಾಕಾ ಸಿನಿಮಾದವರೆಗೆ ಲಕ್ಷಗಳಲ್ಲಿದ್ದ ಶ್ರೀಲೀಲಾ ಅವರ ಸಂಭಾವನೆ ಈಗ ಕೋಟಿಗೆ ಹೆಚ್ಚಿದೆಯಂತೆ. ಅವಕಾಶಗಳು ಬಂದಾಗ ಸಂಭಾವನೆ ಹೆಚ್ಚಿಸುವ ಮೂಲಕ ಇತರ ನಾಯಕಿಯರ ಹಾದಿಯಲ್ಲಿ ತಾನೂ ಕೂಡ ನಡೆಯುತ್ತೇನೆ ಎಂಬುದನ್ನು ಈ ಯುವ ಚೆಲುವೆ ಸಾಬೀತುಪಡಿಸಿದ್ದಾರೆ.