ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೇ ನಾಯಿಗಳೊಂದಿಗೆ ಬಿಟ್ಟ ದಂಪತಿ: 6 ವರ್ಷಗಳ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಕ್ಕಳನ್ನು ಸಾಕಲೆಂದೇ ಹಣ ಸ್ವೀಕರಿಸಿ ಸಾರಿಯಾಗೊ ನೋಡಿಕೊಳ್ಳದೇ ನಾಐಇಗಳೊಂದಿಗೆ ಬಿಟ್ಟಿದ್ದಕ್ಕಾಗಿ ದಂಪತಿಗಳಿಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಯುನೈಟೆಡ್ ಕಿಂಗ್‌ಡಮ್‌ನ ಪೂರ್ವ ಸಸೆಕ್ಸ್‌ನಲ್ಲಿ ಘಟನೆ ನಡೆದಿದ್ದು ದಂಪತಿಗಳು ತಮ್ಮ ಮಕ್ಕಳನ್ನು ಮನೆಯಲ್ಲಿ 35 ನಾಯಿಗಳೊಂದಿಗೆ ಕಾಳಜಿಯಿಲ್ಲದೆ ಬಿಟ್ಟು ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಕಾರಣಕ್ಕಾಗಿ ಸೋಮವಾರ ಜೈಲು ಪಾಲಾಗಿದ್ದಾರೆ.

ಆರೋಪಿಗಳಾದ ಕ್ರಿಸ್ಟೋಫರ್ ಬೆನೆಟ್ (35) ಮತ್ತು ಗೆಮ್ಮಾ ಬ್ರೋಗನ್ (41), ಮಕ್ಕಳ ನಿರ್ಲಕ್ಷ್ಯದ ಅಪರಾಧಕ್ಕೆ ಲೆವೆಸ್ ಕ್ರೌನ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ನಂತರ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ 7,000 ಯೂರೋಗಳನ್ನು (ಸುಮಾರು 57,000 ರೂಪಾಯಿಗಳು) ಪಡೆಯುತ್ತಿದ್ದ ದಂಪತಿಗಳು ಮಕ್ಕಳನ್ನು ನೋಡಿಕೊಳ್ಳಲು ಅಥವಾ ಅವರ ಯೋಗಕ್ಷೇಮಕ್ಕಾಗಿ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ ಎಂದು ನ್ಯಾಯಾಲಯವು ಗಮನಿಸಿದ್ದು ಆರು ವರ್ಷಗಳ ಶಿಕ್ಷೆಗೆ ಆದೇಶ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.

ದಂಪತಿಗಳು ಅಕ್ರಮ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದ್ದು ಪೋಲೀಸರು ಮನೆಯೊಳಗೆ ಪ್ರವೇಶಿಸಿದಾಗ ಅಲ್ಲಿ 35 ನಾಯಿಗಳೊಂದಿಗೆ ಮಕ್ಕಳಿರುವುದು ಪತ್ತೆಯಾಗಿದೆ. ಇದು ನಂಬಲಸಾಧ್ಯವಾದುದು. ಮಕ್ಕಳ ಮೇಲೆ ನಿರ್ಲಕ್ಷ್ಯ ತೋರಿ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಪೋಲೀಸರು ಆರೋಪಿಸಿದ್ದಾರೆ. ಈ ಹಿಂದೆಯೂ ಕೂಡ ಕೌಟುಂಬಿಕ ಹಿಂಸೆ, ಪ್ರಾಣಿ ಹಿಂಸೆ ಸೇರಿದಂತೆ ಹಲವು ಪ್ರಕರಣಗಳ ಈ ದಂಪತಿಯ ವಿರುದ್ಧ ದಾಖಲಾಗಿದ್ದವು ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!