CINE| ಕನ್ನಡ-ತೆಲುಗು ಆಯ್ತು..ತಮಿಳಿಗೂ ಕಾಲಿಟ್ಟ ನಟಿ ಶ್ರೀಲೀಲಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ಚೆಲುವೆ ಶ್ರೀಲೀಲಾ ಬಗ್ಗೆ ಎಷ್ಟು ಹೇಳಿದರೂ ಸಾಲದು..ಸಾಲು ಸಾಲು ಸಿನಿಮಾ ಅವಕಾಶಗಳ ಸುರಿಮಳೆಯೇ ಇದೆ. ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿರುವ ನಟಿ ಇದೀಗ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ದೊಡ್ಡ ಅವಕಾಶಗಳಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ ತೆಲುಗು ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದಾರೆ. ಅವಕಾಶಗಳು ಹೆಚ್ಚಾಗುತ್ತಿದ್ದಂತೆಯೇ ಶ್ರೀಲೀಲಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಗುಸುಗುಸು ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

ಬಹುಬೇಡಿಕೆಯ ನಟಿಗೀಗ ತಮಿಳಿನಲ್ಲೂ ಮಣೆ ಹಾಕಿದ್ದಾರೆ. ಯಾವ ಸಿನಿಮಾ, ನಿರ್ದೇಶಕ ಮತ್ತಿತರ ಟಪ್ಡೇಟ್ಸ್‌ ತಿಳಿದು ಬರಬೇಕಿದೆ. ಸಿನಿಮಾಗಳ ಜೊತೆಗೆ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿದ್ದಾರಂತೆ. ಶ್ರೀಲೀಲಾ ತಮ್ಮ ಸಂಭಾವನೆಯನ್ನು ಮೂರು ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮಹೇಶ್ ಬಾಬು ಅವರ ‘ಗುಂಟೂರ್ ಖಾರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್’ ಸಿಂಗ್ ಚಿತ್ರದಲ್ಲಿ ಶ್ರೀಲೀಲಾ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ತಮಿಳು ಸಿನಿಮಾಗಳಿಗೂ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ವರದಿಗಳಿವೆ. ಸದ್ಯದಲ್ಲೇ ಮಾಹಿತಿ ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!