Friday, March 31, 2023

Latest Posts

ಪತಿಯನ್ನು ಬಾಯ್ ಎಂದ ನಟಿ ಸ್ವರಾ ಭಾಸ್ಕರ್: ಕೊನೆಗೂ ಮೌನ ಮುರಿದ ಫಹಾದ್ ಅಹ್ಮದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿರುವ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಫೆಬ್ರವರಿ 17 ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ಶಾಕ್ ನೀಡಿದರು. ಇಬ್ಬರೂ ರ್ಯಾಲಿಯಲ್ಲಿ ಭೇಟಿಯಾಗಿದ್ದರು ಬಳಿಕ ಸ್ನೇಹಿತರಾಗಿ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸಿದ್ದಾರೆ.

ಇತ್ತ ಇಬ್ಬರ ಮದುವೆ ಸುದ್ದಿ ರಿವೀಲ್ ಆಗುತ್ತಿದ್ದಂತೆ ಸ್ವರಾ ಭಾಸ್ಕರ್ ಹಳೆಯ ಟ್ವೀಟ್ ವೈರಲ್ ಆಗಿದೆ. ಮದುವೆಗೂ ಕೆಲವೇ ದಿನಗಳ ಮೊದಲು ಸ್ವರಾ ಭಾಸ್ಕರ್ ಪತಿಗೆ ಅಣ್ಣ ಎಂದು ಕರೆದಿದ್ದರು. ಈ ಟ್ವೀಟ್ ಸದ್ಯ ವೈರಲ್ ಆಗಿದ್ದಲ್ಲದೆ ಸ್ವರಾ ದಂಪತಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು.
ಇದೀಗ ಈ ಕುರಿತು ಕೊನೆಗೂ ಸ್ವರಾ ಪತಿ ಫಹಾದ್ ಪ್ರತಿಕ್ರಿಯೆ ನೀಡಿದ್ದಾರೆ.

ಜೋಕ್ ಎಂದು ಬರೆದುಕೊಂಡಿರುವ ಫಹಾದ್, ‘ಹಿಂದೂ-ಮುಸ್ಲಿಂ ಸಹೋದರರು ಮತ್ತು ಸಹೋದರಿಯರಾಗಬಹುದು ಎಂದು ಸಂಘಿಗಳು ಒಪ್ಪಿಕೊಂಡಿದ್ದಾರೆ. ಈಗ ಪತಿ ಮತ್ತು ಪತ್ನಿ ತಮಾಷೆ ಮಾಡಬಹುದು ಎಂದು ಒಪ್ಪಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ. ಪತಿ ಫಹಾದ್ ಪೋಸ್ಟ್ ಅನ್ನು ಸ್ವರಾ ಭಾಸ್ಕರ್ ರೀ ಟ್ವೀಟ್ ಮಾಡಿದ್ದಾರೆ.

ಸ್ವರಾ ಪತಿಯನ್ನು ಅಣ್ಣ (ಭಾಯ್) ಎಂದು ಕರೆದಿದ್ದ ಹಳೆಯ ಟ್ವೀಟ್ ವೈರಲ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. ‘ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ’ ಎಂದು ಹೇಳಿದ್ದರು. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹೇಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!