CINE | ಸೌತ್‌ನಲ್ಲೂ ನನ್ನ ದೇವಸ್ಥಾನ ಓಪನ್‌ ಆಗ್ಬೇಕು ಎಂದು ಮತ್ತೆ ಟ್ರೋಲ್‌ ಆದ ನಟಿ ಊರ್ವಶಿ ರೌಟೆಲ್ಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾರ್ಥ್‌ನಲ್ಲಿ ನನ್ನ ಹೆಸರಿನ ದೇವಸ್ಥಾನ ಇದೆ, ಅದೇ ರೀತಿ ಸೌತ್‌ನಲ್ಲೂ ನನಗಾಗಿ ಒಂದು ದೇವಸ್ಥಾನ ಬೇಕು ಎಂದು ನಟಿ ಊರ್ವಶಿ ರೌಟೆಲಾ ಹೇಳಿ ಟ್ರೋಲ್‌ಗೆ ಸಿಲುಕಿದ್ದಾರೆ.

ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ‘ಊರ್ವಶಿ’ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರೀನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ. ಇದು ನನಗೆ ಸಮರ್ಪಿಸಲಾಗಿದೆ ಎಂದಿದ್ದಾರೆ. ದಕ್ಷಿಣ ಭಾರತದಲ್ಲೂ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನ ಆಗಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಯಿಂದ ಊರ್ವಶಿ ಟ್ರೋಲ್‌ ಆಗಿದ್ದು, ಎಲ್ಲರಿಗೂ ಒಂದೊಂದು ದೇವಸ್ಥಾನ ಕಟ್ಟೋಕೆ ಆಗತ್ತಾ? ಅಂಥದ್ದು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!