ಮಗನಿಂದಲೇ ಹತ್ಯೆಯಾಗಿದ್ದೇರೆಂಬ ನಟಿ ವೀಣಾ ಕಪೂರ್ ಪ್ರತ್ಯಕ್ಷ: ಸುಳ್ಳು ಸುದ್ದಿ ವಿರುದ್ಧ ಎಫ್‌ಐಆರ್ ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಗನಿಂದಲೇ ಹತ್ಯೆಯಾಗಿದ್ದಾರೆಂದು ವದಂತಿ ಹಬ್ಬಿಸಿದವರ ವಿರುದ್ಧ ನಟಿ ವೀಣಾ ಕಪೂರ್ . ಮುಂಬೈನ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಮಗನೇ ಹತ್ಯೆ ಮಾಡಿದ್ದಾನೆಂಬ ಸುದ್ದಿ ವೈರಲ್ ಆಗಿ ಹರಿದಾಡಿತ್ತು. ಇದೀಗ ವದಂತಿಗಳನ್ನು ಹರಡಿದವರ ವಿರುದ್ಧ ನಟಿ ವೀಣಾ ಕಪೂರ್ ತನ್ನ ಮಗನೊಂದಿಗೆ ಎಫ್‌ಐಆರ್ ದಾಖಲಿಸಿದ್ದಾರೆ.

ಇದು ಸುಳ್ಳು ಸುದ್ದಿ. ನಿಜವೆಂದರೆ ವೀಣಾ ಕಪೂರ್ ಕೊಲೆಯಾಗಿದ್ದಾಳೆ. ಆದರೆ ನಾನು ಆ ವೀಣಾ ಕಪೂರ್ ಅಲ್ಲ . ಹೆಸರು ಒಂದೇ ಆದರೂ ನಾನು ಗೋರೆಗಾಂವ್‌ನಲ್ಲಿ ಇರುತ್ತೇನೆ. ಜುಹುವಿನಲ್ಲಲ್ಲ. ನಾನು ನನ್ನ ಮಗನ ಜೊತೆಗೇ ಇದ್ದೇನೆ ಎಂದರು. ತಾನು ಸತ್ತಿದ್ದೇನೆ ಎಂದು ಭಾವಿಸಿದ ಜನರಿಗೆ ತಿಳಿಸಿದ ಸಂದೇಶದಲ್ಲಿ ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ. ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!