ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ವಿದ್ಯಾ ಬಾಲನ್‌ಗೆ ಇಂದು ಜನ್ಮದಿನದ ಸಂಭ್ರಮ, ಈ ದಿನದಂದು ವಿದ್ಯಾ ಬಾಲನ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ.
ಸಾಮಾನ್ಯವಾಗಿ ಮೊದಲ ಬಾರಿ ಭೇಟಿ ಮಾಡಿದ ‘ಲವ್ ಎಟ್ ಫಸ್ಟ್ ಸೈಟ್’ ಆಗುತ್ತದೆ. ಆದರೆ, ವಿದ್ಯಾ ಬಾಲನ್‌ಗೆ ಆಗಿದ್ದು, ‘ಲಸ್ಟ್ ಎಟ್ ಫಸ್ಟ್ ಸೈಟ್’. ‘ನಾನು ಸಿದ್ದಾರ್ಥ್ ಅವರನ್ನು ಮೊದಲ ಬಾರಿಗೆ ನೋಡಿದಾಗ ದೈಹಿಕವಾಗಿ ಅವರಿಗೆ ಅಟ್ರ್ಯಾಕ್ಟ್ ಆದೆ. ಅವರು ಸಖತ್ ಹ್ಯಾಂಡ್ಸಮ್. ಅವರು ಹೆಚ್ಚು ಖಾಸಗಿ ಆಗಿರಲು ಇಷ್ಟಪಡುತ್ತಿದ್ದರು. ಇದರಿಂದ ಹೆಚ್ಚು ಸುರಕ್ಷಿತ ಎನಿಸಿತು’ ಎಂದಿದ್ದರು ವಿದ್ಯಾ ಬಾಲನ್.
ಮೊದಲ ಮುಂದುವರಿದವರು ಯಾರು ಎಂದು ಕೇಳಿದಾಗ, ಅದು ಸಿದ್ಧಾರ್ಥ್ ಎಂದು ವಿದ್ಯಾ ಹೇಳಿದ್ದಾರೆ. ಜನಪ್ರಿಯತೆ ವಿದ್ಯಾಗೆ ಹೊಸತಾಗಿದ್ದರಿಂದ ಅವರು ಯಾರಿಗೂ ಹತ್ತಿರ ಆಗಿರಲಿಲ್ಲ. ಆಗ ಅವರಿಗೆ ಕಂಡಿದ್ದು ಸಿದ್ಧಾರ್ಥ. ವಿದ್ಯಾ ಬಾಲನ್ ಈ ಮೊದಲು ಡೇಟ್ ಮಾಡಿದ್ದರು. ಆದರೆ, ಅದು ಬ್ರೇಕಪ್ನಲ್ಲಿ ಕೊನೆ ಆಯಿತು. ಹೀಗಾಗಿ, ಸಿದ್ದಾರ್ಥ್ನ ಮದುವೆ ಆಗುವ ಯಾವುದೇ ಆಲೋಚನೆ ವಿದ್ಯಾಗೆ ಇರಲಿಲ್ಲ. ಸಿದ್ದಾರ್ಥ್ ಅವರೇ ಈ ವಿಚಾರದಲ್ಲಿ ಮುಂದುವರಿದರು ಎನ್ನಲಾಗಿದೆ.
ವಿದ್ಯಾ ಬಾಲನ್ 30 ವರ್ಷದವರಾಗಿದ್ದಾಗ ಸಾಕಷ್ಟು ಖ್ಯಾತಿಯನ್ನು ಕಂಡಿದ್ದು ನಿಜ. ಆದರೆ ನಂತರ, ಒಂಟಿತನವನ್ನು ಅನುಭವಿಸಲು ಪ್ರಾರಂಭಿಸಿದರು. ಹೀಗಾಗಿ, ಅವರಿಗೆ ಒಬ್ಬರು ಬೇಕಿತ್ತು. ದಿನದ ಕೊನೆಯಲ್ಲಿ ನಿಮ್ಮ ಗೆಲುವು ಮತ್ತು ಸೋಲುಗಳನ್ನು ಹಂಚಿಕೊಳ್ಳಲು ಒಬ್ಬರು ಬೇಕು ಎಂದರು ಅವರು.