ಸಚಿವೆ ರೋಜಾ ಪರ ನಿಂತ ಸಹ ನಟಿಯರು, ಮಾಜಿ ಮಂತ್ರಿ ಬಂಡಾರು ಕ್ಷಮೆಗೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಪಿ ಸಚಿವೆ ರೋಜಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಟಿಡಿಪಿ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಮೂರ್ತಿ ವಿರುದ್ಧ ಸಿನಿಮಾ ನಟಿಯರೂ ತಿರುಗಿಬಿದ್ದಿದ್ದಾರೆ. ಬಂಡಾರು ಹೇಳಿಕೆಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ರೋಜಾ ಸಹ-ನಟಿಯರು, ರಾಷ್ಟ್ರ ಮಟ್ಟದ ನಾಯಕರು ಮತ್ತು ನೆರೆಯ ರಾಜ್ಯಗಳ ನಾಯಕರೂ ಬೆಂಬಲಿಸುತ್ತಿದ್ದಾರೆ.

ಇದೀಗ ಚಿತ್ರ ನಟಿಯರಾದ ಮೀನಾ ಹಾಗೂ ರಮ್ಯಕೃಷ್ಣ ರೋಜಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ಮಾತನಾಡಿರುವ ಬಂಡಾರು ಕೂಡಲೇ ಕ್ಷಮೆಯಾಚಿಸಬೇಕು. ರೋಜಾ ಜೊತೆ ನಾನೂ ನಟಿಸಿದ್ದೇನೆ, ಅವರನ್ನು ಚೆನ್ನಾಗಿ ಬಲ್ಲೆ. ಹೆಣ್ಣೊಬ್ಬಳು ಜೀವನದಲ್ಲಿ ಬೆಳೆಯುತ್ತಿರುವಾಗ ಹೀಗೆ ಮಾತನಾಡುತ್ತೀರಾ? ಎಂದು ನಟಿ ಮಿಣಾ ಪ್ರಶ್ನಿಸಿದ್ದಾರೆ.

ಹೀಗೆ ಮಾತನಾಡಿದರೆ ಹೆಣ್ಮಕ್ಕಳು ಮನೆಗೆ ಸೀಮಿತವಾಗುತ್ತಾರೆ ಎಂದುಕೊಳ್ಳಬೇಡಿ ಎಂದರು. ಹೀಗೆ ಕೀಳುಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ರೀತಿ ಮಾತನಾಡಿದವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ನಟಿ ರಮ್ಯಕೃಷ್ಣ ಆಗ್ರಹಿಸಿದರು.

ಸಚಿವೆ ಆರ್.ಕೆ.ರೋಜಾ ನೀಲಿ ಚಿತ್ರಗಳಲ್ಲಿ ನಟಿಸಿದ್ದು, ಆ ವಿಡಿಯೋಗಳನ್ನು ಬಿಡುಗಡೆ ಮಾಡಿದರೆ ಏನಾಗುತ್ತದೆ ಎಂಬ ವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಮೂರ್ತಿ ವಿರುದ್ಧ ಗುಂಟೂರು, ಪಾಲೆಂ ಪಿಎಸ್‌ನಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆತನನ್ನು ನರಸೀಪಟ್ಟಣದಿಂದ ಬಂಧಿಸಿ ಗುಂಟೂರಿಗೆ ಕರೆದೊಯ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!