NDTV ಯಲ್ಲಿ ಹೆಚ್ಚುವರಿ 26% ಪಾಲನ್ನು ಪಡೆಯಲು ಅದಾನಿ ಸಮೂಹ ಸಂಸ್ಥೆಗಳ ಆಫರ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಪ್ರತಿಷ್ಟಿತ ಸುದ್ದಿ ಮಾಧ್ಯಮ NDTV (ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್) ಸದ್ಯ ಭಾರಿ ಚರ್ಚೆಯಲ್ಲಿದೆ. ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್‌ ಅದಾನಿ ಒಡೆತನದ ಅದಾನಿ ಗ್ರುಪ್‌ NDTV ಯ 29% ಪಾಲನ್ನು ಸ್ವಾಧೀನಪಡಿಸಿಕೊಂಡಿರುವುದು ಈ ಚರ್ಚೆಗೆ ಕಾರಣವಾಗಿರೋ ಅಂಶ. ಅದಾನಿ ಸಮೂಹವು ವಿಶ್ವಪ್ರಧನ್ ಕಮರ್ಷಿಯಲ್ ಪ್ರೈವೇಟ್ ನ ಮೂಲಕ ಎನ್‌ಡಿಟಿವಿಯ ಪಾಲನ್ನು ಪರೋಕ್ಷವಾಗಿ ಸ್ವಾಧೀನಪಡಿಸಿಕೊಂಡಿವೆ.

ಭಾರತದ ಸೆಕ್ಯುರಿಟೀಸ್ ಕಾನೂನಿನ ಪ್ರಕಾರ, ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಲ್ಲಿ 25% ಕ್ಕಿಂತ ಹೆಚ್ಚು ಈಕ್ವಿಟಿಯನ್ನು ಸ್ವಾಧೀನಪಡಿಸಿಕೊಳ್ಳುವ ಘಟಕವು ಸಾರ್ವಜನಿಕ ಷೇರುದಾರರಿಂದ ಹೆಚ್ಚುವರಿ 26% ಅನ್ನು ಪಡೆಯಲು ಮುಕ್ತ ಕೊಡುಗೆಯನ್ನು(ಓಪನ್‌ ಆಫರ್) ಪ್ರಾರಂಭಿಸಬೇಕು. ಈ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳು 26 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಮಾಡಿದೆ.

ಅದಾನಿ ಗ್ರೂಪ್ ಸಂಸ್ಥೆಗಳು ಮಂಗಳವಾರ, ಆಗಸ್ಟ್ 23 ರಂದು, ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (NDTV) ನಲ್ಲಿ ಮಾಧ್ಯಮ ಮತ್ತು ಸುದ್ದಿ ಪ್ರಸಾರಕದಲ್ಲಿ 29.18 ರಷ್ಟು ಷೇರುಗಳನ್ನು ಪರೋಕ್ಷವಾಗಿ ಸ್ವಾಧೀನಪಡಿಸಿಕೊಂಡ ನಂತರ 26 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಮಾಡಿದೆ. 4ರೂ. ಮುಖಬೆಲೆಯ NDTV ಯ 1,67,62,530 ವರೆಗಿನ ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆಫರ್‌ ನೀಡಲಾಗಿದೆ. ಪ್ರತಿಷೇರಿಗೆ 294 ರೂ. ಆಫರ್‌ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಷೇರುಮಾರುಕಟ್ಟೆಯಲ್ಲೂ ಕೂಡ NDTV ಯ ಷೇರುಗಳು ಜಿಗಿದಿದ್ದು 370ರ ಆಸುಪಾಸಿನಲ್ಲಿದ್ದ ಷೇರುಗಳು 395ರ ಗಡಿಯನ್ನು ತಲುಪುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!