Tuesday, March 28, 2023

Latest Posts

ಹಿಂಡೆನ್‌ಬರ್ಗ್‌ ವಿವಾದದ ನಡುವೆ 500 ಮಿಲಿಯನ್‌ ಡಾಲರ್‌ ಸಾಲ ಪೂರ್ವಪಾವತಿಗೆ ಯೋಚಿಸುತ್ತಿದೆ ಅದಾನಿ ಸಮೂಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಂಡೆನ್‌ ಬರ್ಗ್‌ ಶಾರ್ಟ್‌ ಸೆಲ್ಲರ್‌ ಪ್ರಕಟಿಸಿದ ವರದಿಯಿಂದಾಗಿ ತೀವ್ರ ಹಣಕಾಸು ನಷ್ಟ ಅನುಭವಿಸಿದ ಅದಾನಿ ಸಮೂಹವು ತನ್ನ ನಷ್ಟವನ್ನು ಸರಿಪಡಿಸಿ ಹಣಕಾಸಿನ ಸ್ಥಿತಿಯನ್ನು ಉತ್ತಮವಾಗಿಸಿಕೊಳ್ಳಲು ಇದೀಗ ಬ್ಯಾಂಕುಗಳಿಗೆ ತನ್ನ 500 ಮಿಲಿಯನ್‌ ಡಾಲರುಗಳಷ್ಟು ಸಾಲವನ್ನು ಪೂರ್ವ ಪಾವತಿ ಮಾಡಲು ಯೋಚಿಸಿದೆ.

ಸಾಲವನ್ನು ಪೂರ್ವ ಪಾವತಿ ಮಾಡಲು ಅದಾನಿ ಸಮೂಹವು ಯೋಚಿಸಿದ್ದು ಮರುಪಾವತಿ ವಿಷಯದ ಕುರಿತಾಗಿ ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅದಾನಿ ಸಮೂಹದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಬಾರ್ಕ್ಲೇಸ್ ಪಿಎಲ್‌ಸಿ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಿಎಲ್‌ಸಿ ಮತ್ತು ಡಾಯ್ಚ ಬ್ಯಾಂಕ್ ಎಜಿ ಕಳೆದ ವರ್ಷ ಹೋಲ್ಸಿಮ್ ಲಿಮಿಟೆಡ್ ಸಿಮೆಂಟ್ ಸ್ವತ್ತುಗಳ ಖರೀದಿಗೆ ಹಣಕಾಸು ಒದಗಿಸಲು ಅದಾನಿಗೆ 4.5 ಬಿಲಿಯನ್ ಡಾಲರ್‌ ಸಾಲ ನೀಡಿದ್ದವು. ಈ ಸಾಲವನ್ನು ಪೂರ್ವ ಪಾವತಿಸಲು ಇದೀಗ ಅದಾನಿ ಸಮೂಹ ಮುಂದಾಗಿದೆ.

ಈ ಹಿಂದೆ ಮಂಗಳವಾರ ಅದಾನಿಸ ಮೂಹವು ಕೆಲ ಸಾಲವನ್ನು ಪೂರ್ವಭಾವಿಯಾಗಿ ಪಾವತಿಸಿತ್ತು. ಪರಿಣಾಮ ಷೇರುಮಾರುಕಟ್ಟೆಯಲ್ಲಿ ಕುಸಿದಿದ್ದ ಷೇರುಗಳು ತುಸು ಏರಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!