ಅದಾನಿ ಟೋಟಲ್‌ ಗ್ಯಾಸ್‌ ಪಿಎನ್‌ಜಿ, ಸಿಎನ್‌ಜಿ ದರ ಕಡಿತ: ಲೇಟೆಸ್ಟ್‌ ರೇಟ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೌತಮ್‌ ಅದಾನಿ ನೇತೃತ್ವದ ಅದಾನಿ ಸಮೂಹದ ಒಡೆತನ ಹೊಂದಿರುವ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ಎಟಿಜಿಎಲ್) ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್ (ಸಿಎನ್‌ಜಿ)‌ ಹಾಗು ಪೈಪ್ಡ್ ನ್ಯಾಚುರಲ್‌ ಗ್ಯಾಸ್‌ (ಪಿಎನ್‌ಜಿ) ದರವನ್ನು ಇಳಿಕೆ ಮಾಡಿದೆ. ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 8.13 ರೂ.ವರೆಗೆ ಹಾಗು ಪಿಎನ್‌ಜಿ ದರವನ್ನು ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 5.06 ರೂ. ವರೆಗೆ ಕಡಿಮೆ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಪರಿಷ್ಕೃತ ಬೆಲೆಯು ಏಪ್ರಿಲ್ 8ರ ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರಲಿದೆ.

ಇದರ ಅನ್ವಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ಪ್ರತಿ ಕಿಲೋಗ್ರಾಂಗೆ 79 ರೂ.ಗಳಲ್ಲಿ ಲಭ್ಯವಾಗಲಿದೆ ಮತ್ತು ಪಿಎನ್‌ಜಿ ಮಾರುಕಟ್ಟೆಯಲ್ಲಿ 49 ರೂ. ಗೆ ಲಭ್ಯವಾಗಲಿದೆ.

ದೇಶೀಯವಾಗಿ-ಉತ್ಪಾದಿತ ನೈಸರ್ಗಿಕ ಅನಿಲದ ಹೊಸ ಬೆಲೆ ಕಾರ್ಯವಿಧಾನವನ್ನು ಕ್ಯಾಬಿನೆಟ್ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಕ್ರಿಸಿಲ್ ರೇಟಿಂಗ್ಸ್ ವರದಿಯ ಪ್ರಕಾರ, ಪರಿಷ್ಕೃತ ಕಾರ್ಯವಿಧಾನವು ಸಿಎನ್‌ಜಿ, ಪಿಎನ್‌ಜಿ ವೆಚ್ಚಗಳನ್ನು ಸುಮಾರು 9 ರಿಂದ 11 ಶೇಕಡಾದಷ್ಟು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!