ಹೊಸದಿಗಂತ ವರದಿ ರಾಯಚೂರು :
ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಕೆಲವೆಡೆ ನೀರಿನ ಪ್ರಮಾಣ ನಿಗದಿಯಂತೆ ಹರಿಯದ ಕಾರಣಕ್ಕೆ ಮಾನ್ವಿ, ಸಿರವಾರ ಹಾಗೂ ರಾಯಚೂರು ಭಾಗದಲ್ಲಿನ ಕಾಲುವೆಯಲ್ಲಿ ನೀರಿನ ಪ್ರಮಾಣ ಸಮರ್ಪಕವಾಗಿಲ್ಲದ ಕಾರಣಕ್ಕೆ ರೈತರಿಗೆ ತೊಂದರೆ ಆಗುತ್ತಿದೆ ಇದನ್ನು ತಪ್ಪಿಸಲು ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಕಾಯ್ದುಕೊಳ್ಳುವಂತೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರು ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯಲ್ಲಿನ ಹರಿಯುವ ನೀರಿನ ಪ್ರಮಾಣವನ್ನು ಪರಿಶೀಲನೆ ಸಂದರ್ಭದಲ್ಲಿ ಮೈಲ್ 69 ರಲ್ಲಿ9 ಅಡಿ, ಮೈಲ್ 47 ರಲ್ಲಿ 12 ಅಡಿ ನೀರು ಸರಬರಾಜು ಆಗುತ್ತಿದೆ ಇದು ನಿಗದಿತ ಪ್ರಮಾಣಕ್ಕೂ ಕಡಿಮೆ ಪ್ರಮಾಣವಾಗಿದೆ. ಇದರಿಂದ ಕೆಳಭಾಗದಲ್ಲಿನ ಮಾನ್ವಿ, ಸಿರವಾರ, ರಾಯಚೂರು ತಾಲೂಕುಗಳಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ ಶೀಘ್ರವಾಗಿ ಮೈಲ್ 69 ಹಾಗೂ 47 ರಲ್ಲಿ ಸರಿಯಾದ ನೀರಿನ ಹರಿವಿನ ಪ್ರಮಾಣವನ್ನು ಕಾಯ್ದಿರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.