Tuesday, May 30, 2023

Latest Posts

CINEMA | ಆದಿಪುರುಷ್ ಪೋಸ್ಟರ್ ರಿಲೀಸ್, ಇದ್ಯಾವ ಫಿಲ್ಟರ್ ಅಂತಿದ್ದಾರೆ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ರಾಮನವಮಿಯ ಶುಭ ದಿನದಂದು ಆದಿಪುರುಷ್ ಸಿನಿಮಾ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಈ ಹಿಂದೆ ಆದಿಪುರುಷ್ ಟೀಸರ್ ರಿಲೀಸ್ ಆಗಿದ್ದು, ಗ್ರಾಫಿಕ್ಸ್ ಕಳಪೆಮಟ್ಟದ್ದು ಎಂದು ನೆಟ್ಟಿಗರು ಜಾಲಾಡಿದ್ದರು, ಟೀಂಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪೋಸ್ಟರ್‌ಗೂ ನೆಗೆಟಿವ್ ಕಮೆಂಟ್ಸ್ ಬರುತ್ತಿವೆ.

Prabhas, Kriti Sanon turn Ram and Sita in new poster of Adipurush. See here  - India Todayಯಾವುದೋ ಇನ್ಸ್ಟಾಗ್ರಾಂ ಫಿಲ್ಟರ್ ಬಳಸಿ ಫೋಟೊ ಎಡಿಟ್ ಮಾಡಿದ ಹಾಗೆ ಕಾಣುತ್ತಿದೆ ಎಂದು ಪೋಸ್ಟರ್‌ನ್ನು ಟ್ರೋಲ್ ಮಾಡಲಾಗುತ್ತದೆ. ಜನರು ಸಾಕಷ್ಟು ನಿರೀಕ್ಷೆ ಇಟ್ಟಿದ್ದ ಸಿನಿಮಾ ಗ್ರಾಫಿಕ್ಸ್ ಅಂದುಕೊಂಡಷ್ಟು ಚೆನ್ನಾಗಿಲ್ಲದ ಕಾರಣ ಜನ ಸಿನಿಮಾ ಬಗ್ಗೆ ಆಸಕ್ತಿ ತೋರಿರಲಿಲ್ಲ.

First teaser, poster of Prabhas starrer 'Adipurush' unveiled, deets inside  - Articlesಗ್ರಾಫಿಕ್ಸ್ ಸಿನಿಮಾ ಹೈಲೈಟ್ ಆಗಿದ್ದು,ಅದೇ ಚೆನ್ನಾಗಿಲ್ಲ ಎಂದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು. ಜನರ ಅಭಿಪ್ರಾಯ ತಿಳಿದ ನಿರ್ದೇಶಕರು ಗ್ರಾಫಿಕ್ಸ್ ಹೊಸತಾಗಿ ಮಾಡಲು ಆರಂಭಿಸಿದ್ದರು. ಇದೇ ಕಾರಣಕ್ಕೆ ಸಿನಿಮಾ ತಡವಾಗಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಇದೀಗ ಪೋಸ್ಟರ್‌ಗೂ ಸೇಮ್ ರಿಯಾಕ್ಷನ್ ಬಂದಿದ್ದು,  ಜನ ಸಿನಿಮಾ ಒಪ್ಪುತ್ತಾರಾ? ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!