ನಾಳೆ ಸೂರ್ಯನ ಮೇಲೆ ಆದಿತ್ಯ ಎಲ್ 1 ಉಡಾವಣೆ: ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಇಸ್ರೋ ಮುಖ್ಯಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರಯಾನ-3ರ ಯಶಸ್ವಿಯ ಬೆನ್ನಲ್ಲೇ ಇಸ್ರೋ ನಾಳೆ ಸೂರ್ಯನ ಮೇಲೆ ಅಧ್ಯಯನ ನಡೆಸಲು ಆದಿತ್ಯ ಎಲ್ 1 (Aditya L-1) ಮಿಷನ್ ಉಡಾವಣೆಗೆ ಇಸ್ರೋ (ISRO) ಸಜ್ಜಾಗಿದೆ.

ಇದರ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ (S Somnath) ಅವರು ತಿರುಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ಶುಕ್ರವಾರ ತಿರುಪತಿಯ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿ ಎಸ್ ಸೋಮನಾಥ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಸ್ರೋವಿನ ಮುಂದಿನ ಮಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದಿತ್ಯ ಎಲ್ 1 ಶನಿವಾರ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಈ ಕಾರ್ಯಾಚರಣೆಯು ಗಮ್ಯ ಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ. ಬಳಿಕ ಸೂರ್ಯನ ಮೇಲೆ ಅಧ್ಯಯನ ನಡೆಸಲಿದೆ ಎಂದು ಎಸ್ ಸೋಮನಾಥ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!