ಆದಿತ್ಯ-ಎಲ್ 1 ನೌಕೆಯ ಪಥ ಸರಿಪಡಿಸುವಿಕೆ ಕಾರ್ಯ ಯಶಸ್ಸು: ಇಸ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಸುಮಾರು 16 ಸೆಕೆಂಡುಗಳ ಪಥ ಸರಿಪಡಿಸುವಿಕೆ ಕಾರ್ಯ (TCM – Trajectory Correction Maneuvre) ಯಶಸ್ವಿಯಾಗಿ ನೆರವೇರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದೆ.

ಇಂದು (ಅಕ್ಟೋಬರ್ 6 ರಂದು) ನೌಕೆಯ ಪಥ ಸರಿಪಡಿಸುವಿಕೆ ಪ್ರಕ್ರಿಯೆ ಮಾಡಲಾಯಿತು. ಬಾಹ್ಯಾಕಾಶ ನೌಕೆಯು L1 ಸುತ್ತ ಹಾಲೋ ಕಕ್ಷೆಯ ಅಳವಡಿಕೆಯ ಕಡೆಗೆ ಅದರ ಉದ್ದೇಶಿತ ಮಾರ್ಗದಲ್ಲಿದೆ ಎಂದು TCM ಖಚಿತಪಡಿಸುತ್ತಿದೆ. ಆದಿತ್ಯ-L1 ಪ್ರಗತಿಯಲ್ಲಿದೆ, ಮ್ಯಾಗ್ನೆಟೋಮೀಟರ್ ಅನ್ನು ಕೆಲವೇ ದಿನಗಳಲ್ಲಿ ಮರುಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ದಲ್ಲಿ ಮಾಹಿತಿ ಹಂಚಿಕೊಂಡ ಇಸ್ರೋ, ಸೆಪ್ಟೆಂಬರ್ 19, 2023 ರಂದು ನಡೆಸಿದ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 ಅಳವಡಿಕೆ (TL1I) ಕುಶಲತೆಯನ್ನು ಟ್ರ್ಯಾಕ್ ಮಾಡಿದ ನಂತರ ಮಾರ್ಗವನ್ನು ಸರಿಪಡಿಸಲು TCM ಅಗತ್ಯವಿದೆ. L1 ಕಕ್ಷೆಯನ್ನು ಪ್ರವೇಶಿಸಲು ಬಾಹ್ಯಾಕಾಶ ನೌಕೆಯು ಸರಿಯಾದ ಹಾದಿಯಲ್ಲಿದೆ ಎಂದು TCM ಖಚಿತಪಡಿಸುತ್ತದೆ. ಬಾಹ್ಯಾಕಾಶ ನೌಕೆಯು ಮುಂದೆ ಚಲಿಸುವುದನ್ನು ಮುಂದುವರೆಸಿದ್ದು, ಮ್ಯಾಗ್ನೆಟೋಮೀಟರ್ ಅನ್ನು ಕೆಲವೇ ದಿನಗಳಲ್ಲಿ ಮರುಪ್ರಾರಂಭಿಸಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ನೌಕೆಯು L 1 ಕಕ್ಷೆಯನ್ನು ತಲುಪಿದಾಗ 2024 ರ ಜನವರಿ ಮೊದಲ ವಾರದೊಳಗೆ ಆದಿತ್ಯ L 1 ರ ಈ ಕ್ರೂಸ್ ಹಂತವು ಪೂರ್ಣಗೊಳ್ಳುತ್ತದೆ. ಈ ಮಧ್ಯೆ ಆದಿತ್ಯ L1 ನಲ್ಲಿ ಅಳವಡಿಸಲಾಗಿರುವ ASPEX ಪೇಲೋಡ್‌ನ ಒಂದು ಘಟಕವನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗಿದೆ. ಇದು ಭೂಮಿಯ ಮ್ಯಾಗ್ನೆಟೋಸ್ಪಿಯರ್ ಮತ್ತು ಅದರ ಹೊರಗಿನ ಜಾಗದಲ್ಲಿ ಇರುವ ಶಕ್ತಿಯುತ ಕಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.

ಸೆಪ್ಟೆಂಬರ್ 2 ರಂದು ಯಶಸ್ವಿ ಉಡಾವಣೆಯಾದ ನಂತರ ಆದಿತ್ಯ L 1 ಪ್ರಸ್ತುತ ಭೂಮಿಯ ಕಕ್ಷೆಯನ್ನು ತೊರೆದು L 1 ಪಾಯಿಂಟ್‌ನತ್ತ ವೇಗವಾಗಿ ಚಲಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!