ಡೇಟಾ ಸಂಗ್ರಹಿಸಲು ಆರಂಭಿಸಿದ ಆದಿತ್ಯ L1: ಖುಷಿ ಹಂಚಿಕೊಂಡ ISRO

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಣೇಶ ಚತುರ್ಥಿ ಹಬ್ಬದಂದು ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಗುಡ್‌ನ್ಯೂಸ್‌ ಕೊಟ್ಟಿದ್ದು, ಸೂರ್ಯ ಶಿಕಾರಿಗೆ ಭೂಮಿಯಿಂದ ಹೊರಟ ಆದಿತ್ಯ ಎಲ್‌-1 (Aditya-L1 Mission) ನೌಕೆ ನಿಗದಿತ ಕಕ್ಷೆ (L1 ಪಾಯಿಂಟ್‌) ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ (Scientific Data) ಕಳುಹಿಸಲು ಪ್ರಾರಂಭಿಸಿದೆ.

ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್‌ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳುಹಿಸಿರುವ ಆದಿತ್ಯ-ಎಲ್‌1 ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಪ್ರಾರಂಭಿಸಿದೆ. STEPS ಉಪಕರಣದ ಸಂವೇದಕಗಳು (ಸೆನ್ಸಾರ್‌ಗಳು) ಭೂಮಿಯಿಂದ 50,000 ಕಿಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು (Energetic Ions) ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿದೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನೂ ತೋರಿಸುತ್ತದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!