Monday, October 2, 2023

Latest Posts

ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ (Victoria Hospital) ಡಿಸ್ಚಾರ್ಜ್‌ ಮಾಡಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದು, ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಚೈತ್ರಾ ಸತತ ವೈದ್ಯಕೀಯ ತಪಾಸಣೆ ನಂತರ ಎಲ್ಲಾ ವರದಿಗಳು ನಾರ್ಮಲ್‌ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದು, ಅಲ್ಲಿಂದ ನೇರವಾಗಿ ಪೊಲೀಸರು ಸಿಸಿಬಿ (CCB Police) ಕಚೇರಿಗೆ ಕರೆತಂದಿದ್ದಾರೆ.

ಇಂದಿನಿಂದಲೇ ವಿಚಾರಣೆ ನಡೆಸಲು ಎಲ್ಲಾ ಹಂತದ ಸಿದ್ಧತೆ ಮಾಡಿಕೊಂಡಿದ್ದಾರೆ. ಐದಾರು ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ, ನಂತರ ಸ್ಥಳ ಮಹಜರು ನಡೆಸಬೇಕು. ಬಳಿಕ ಉಳಿದ ಆರೋಪಿಗಳನ್ನೂ ಚೈತ್ರಾಳ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!