ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಗಾಯಕ, ನಿರೂಪಕ ಆದಿತ್ಯ ನಾರಾಯಣ್ ಮತ್ತು ನಟಿ ಶ್ವೇತಾ ಅಗರ್ವಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡ ಅವರು, ಶ್ವೇತಾ ಹಾಗೂ ನಾನು ನಮ್ಮ ಮೊದಲ ಮಗುವನ್ನು ಶೀಘ್ರದಲ್ಲಿಯೇ ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಲು ತುಂಬಾನೇ ಸಂತಸವಾಗುತ್ತಿದೆ ಎಂದು ಆದಿತ್ಯ ನಾರಾಯಣ್ ಬರೆದುಕೊಂಡಿದ್ದಾರೆ.
‘ಶ್ವೇತಾ ಹಾಗೂ ನಾನು ನಮ್ಮ ಜೀವನದ ಹೊಸ ಹಂತಕ್ಕಾಗಿ ಕಾಯುತ್ತಿದ್ದೇವೆ. ನನಗಂತೂ ಇದು ಅತಿ ವಾಸ್ತವಿಕ ಎನಿಸುತ್ತಿದೆ. ನನಗೆ ಮೊದಲಿನಿಂದಲೂ ಮಕ್ಕಳೆಂದೆರೆ ತುಂಬಾನೇ ಇಷ್ಟ. ನಾನು ಕೂಡ ತಂದೆಯಾಗಬೇಕು ಎಂದು ಬಹುದಿನಗಳಿಂದ ಬಯಸಿದ್ದೆ. ನಮ್ಮ ಮನೆಗೆ ಶೀಘ್ರದಲ್ಲಿಯೇ ಒಂದು ವಿಶೇಷ ಶಕ್ತಿ ಆಗಮಿಸಲಿದೆ ಎಂದು ಆದಿತ್ಯ ನಾರಾಯಣ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶ್ವೇತಾ ಅಗರ್ವಾಲ್ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿದ್ದಾರೆ.
ಆದಿತ್ಯ ನಾರಾಯಣ್ ಹಾಗೂ ಶ್ವೇತಾ ಅಗರ್ವಾಲ್ ಮುಂಬೈನಲ್ಲಿ 2020ರ ಡಿಸೆಂಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.