ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಬಾತ್‌ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದರು. ಡ್ರಗ್ ಓವರ್‌ಡೋಸ್‌ನಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದ್ದು, ಇದೀಗ ಈ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಆದಿತ್ಯ ತಲೆಯಲ್ಲಿ ಗಾಯಗಳು ಕಾಣಿಸಿದ್ದು, ಈ ಅನುಮಾನಕ್ಕೆ ಕಾರಣವಾಗಿದೆ. ತಲೆಯಲ್ಲಿ ಗಾಯಗಳಾಗಿವೆ, ಎಲ್ಲಿಯೂ ರಕ್ತಸ್ರಾವವಾಗಿಲ್ಲ, ಆದರೆ ತಲೆ ಭಾಗ ಊದಿಕೊಂಡಿದೆ.
ಬಾತ್‌ರೂಂ ಟೈಲ್ಸ್ ಒಡೆದಿದ್ದು, ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿರಬಹುದು, ಅಥವಾ ಯಾರಾದರೂ ಸಹಜ ಸಾವಿನಂತೆ ಕಾಣು ರೀತಿ ಕೊಲೆ ಮಾಡಿರಬಹುದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ಕ್ಲಾರಿಟಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.