ಉಡ್ಡಯನದ 125 ದಿನಗಳ ನಂತರ ಎಲ್1 ಪಾಯಿಂಟ್ ತಲುಪಲಿರುವ ‘ಆದಿತ್ಯ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ಕ್ಷಣಗಳಲ್ಲಿ ಸೂರ್ಯನತ್ತ ಆದಿತ್ಯ ಎಲ್ 1 ಉಡಾವಣೆಯಾಗಲಿದೆ. ಇತ್ತೀಚೆಗಷ್ಟೇ ಚಂದ್ರಯಾನ-3  ಯಶಸ್ಸು ಕಂಡಿರುವ ಇಸ್ರೋ ಮತ್ತೊಂದು ಯಶಸ್ಸಿಗೆ ಮೊದಲ ಹಂತದಲ್ಲಿದೆ.

ಈ ಬಗ್ಗೆ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಮಾತನಾಡಿದ್ದು, ಉಡ್ಡಯನದ 125 ದಿನಗಳ ನಂತರ ಆದಿತ್ಯ ಅಂತರಿಕ್ಷದಲ್ಲಿ ನಿರ್ಧರಿತ ಸ್ಥಳ ಅಂದರೆ ಎಲ್ 1 ಪಾಯಿಂಟ್ ತಲುಪಲಿದೆ. ಇಲ್ಲಿಂದ ಸೂರ್ಯನ ಅಧ್ಯಯನ ಮಾಡಲಾಗುತ್ತದೆ ಎಂದಿದ್ದಾರೆ.

ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಆದಿತ್ಯ ಎಲ್ 1 ತನ್ನ ಗಮ್ಯ ಸ್ಥಾನಕ್ಕೆ ಪ್ರಯಾಣಿಸಲಿದೆ. ಎಕ್ಸ್ ಎಲ್ ಆವೃತ್ತಿಯ ರಾಕೆಟ್ ಇದಾಗಿದೆ. ಭೂಮಿಯಿಂದ ಸರಿಸುಮಾರು 15 ಲಕ್ಷ ಕಿ.ಮೀ ದೂರದಲ್ಲಿರುವ ಲ್ಯಾಗ್ರೇಜ್ ಪಾಯಿಂಟ್-1ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಸೂರ್ಯನ ಅಧ್ಯಯನ ಮಾಡಲಾಗುತ್ತದೆ.

ಆದಿತ್ಯ ಎಲ್ 1 ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್, ಪ್ರೀ ಫ್ಲೇರ್ ಹಾಗೂ ಫ್ಲೇರ್ ಚಟುವಟಿಕೆಗಳ ಬಗ್ಗೆ ಅರಿಯಲು ಸಹಕರಿಸುತ್ತದೆ. ಡೈನಾಮಿಕ್ಸ್ ಹಾಗೂ ಬಾಹ್ಯಾಕಾಶದ ಹವಾಮಾನ ಸಮಸ್ಯೆಗಳನ್ನು ಅರಿಯಲು ಪ್ರಮುಖ ಮಾಹಿತಿ ಒದಗಿಸುತ್ತದೆ. ದಿನವೂ 1400ಕ್ಕೂ ಹೆಚ್ಚು ಫೋಟೊಗಳನ್ನು ಇಸ್ರೋಗೆ ಕಳಿಸಲಿದ್ದು, ಸೂರ್ಯನ ಅಧ್ಯಯನಕ್ಕೆ ಇದು ಸಹಾಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!