ಹೊಸದಿಗಂತ ಡಿಜಿಟಲ್ ಡೆಸ್ಕ್:
ವೃದ್ಧರು ಮಾತ್ರವಲ್ಲ ವಯಸ್ಕರು ಕೂಡ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಕೊರ್ಬೆವಾಕ್ಸ್ ನ್ನು ಸದ್ಯಕ್ಕೆ 60 ವರ್ಷ ದಾಟಿದವರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೀಡಲಾಗುತ್ತಿದೆ. ಆದರೆ ಕಳೆದ ಆರು ತಿಂಗಳಿನಲ್ಲಿ 18 ವರ್ಷದ ತುಂಬಿದವರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ.
ಮುನ್ನೆಚ್ಚರಿಕೆಯಾಗಿ ಯುವ ಪೀಳಿಗೆಯೂ ಕಾರ್ಬೆವ್ಯಾಕ್ಸ್ ಪಡೆಯಬಹುದು. ಆದರೆ ಸದ್ಯಕ್ಕೆ ವಯಸ್ಸಾದವರಿಗೆ ಆದ್ಯತೆ ನೀಡಲಾಗುತ್ತಿದೆ. ಪೋರ್ಟಲ್‌ನಲ್ಲಿ ವಿವರ ತುಂಬಿ ಸ್ಲಾಟ್ ಬುಕ್ ಆದರೆ ಅದರ ಆಧಾರದ ಮೇಲೆ ಲಸಿಕೆ ನೀಡಬಹುದಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್ ಹೇಳಿದ್ದಾರೆ.
ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿಲ್ಲ. ಈಗಿರುವ 30,000 ಬಾಟಲ್‌ಗಳ ಎಕ್ಸ್ಪೈರಿ ಡೇಟ್ ಮಾರ್ಚ್ ಆಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಯುವಕರಿಗೆ ಲಸಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.