ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಕ್ಕಿಂನಲ್ಲಿ ಭಾರತದ ಗಡಿಯಿಂದ ಸುಮಾರು 150 ಕಿಮೀ ದೂರದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು (Stealth Fighter Jets) ಭದ್ರತೆಗೆ ನಿಯೋಜಿಸಿದೆ. ಮೇ 27ರಂದು ಸಂಗ್ರಹಿಸಲಾದ ಉಪಗ್ರಹ ಚಿತ್ರಗಳು ಇದನ್ನು ದೃಢಪಡಿಸಿವೆ.

ಈ ಚಿತ್ರವನ್ನು ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಅನ್ನು ನೋಡುವ ಸಂಸ್ಥೆಯಾದ ಆಲ್ ಸೋರ್ಸ್ ಅನಾಲಿಸಿಸ್​​ನ ಅನುಮತಿಯೊಂದಿ ಅಭಿವೃದ್ಧಿ ಮಾಡಲಾಗಿದೆ. ಈ ಮೂಲಕ ಚೀನಾ, ಭಾರತ ಗಡಿಯಲ್ಲಿ ಅತ್ಯಂತ ಅಪಾಯಕಾರಿ ವಿಮಾನವನ್ನು ನಿಯೋಜಿಸುವ ಮೂಲಕ ಆತಂಕ ಸೃಷ್ಟಿಸುತ್ತಿದೆ.

ಟಿಬೆಟ್‌ನ 2ನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುತ್ತಿರುವ ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲ್ದಾಣದಲ್ಲಿ 6 ಚೀನೀ ವಾಯುಪಡೆಯ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳ ಉಪಸ್ಥಿತಿಯನ್ನು ಉಪಗ್ರಹ ಚಿತ್ರವು ಬಹಿರಂಗಪಡಿಸುತ್ತದೆ. ಈ ವಿಮಾನ ನಿಲ್ದಾಣವು ಸುಮಾರು ಸಮುದ್ರಮಟ್ಟದಿಂದ 12,408 ಅಡಿಗಳಷ್ಟು ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಸದ್ಯ ಜೆ-20 ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವ ಬಗ್ಗೆ ಭಾರತೀಯ ವಾಯುಪಡೆ (IAF) ಗಮನಕ್ಕೆ ಬಂದಿದ್ದು, ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜೆ -20 ಸ್ಟೆಲ್ತ್ ಫೈಟರ್ ಇಲ್ಲಿಯವರೆಗೆ ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನ. ಈ ವಿಮಾನಗಳು ಮುಖ್ಯವಾಗಿ ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ಆಲ್ ಸೋರ್ಸ್ ಅನಾಲಿಸಿಸ್​ನ ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷ ಹೇಳಿದ್ದಾರೆ. ಈ ವಿಮಾನಗಳು ಟಿಬೆಟ್​ನ ಶಿಗಾಟ್ಸೆಯಲ್ಲಿ ಕಾಣಿಸಿಕೊಂಡಿರುವುದು ವಿಷೇಷ. ಯಾಕೆಂದರೆ ಅವುಗಳನ್ನು ತಮ್ಮ ಸಾಮಾನ್ಯ ಕಾರ್ಯಾಚರಣೆಯ ಪ್ರದೇಶಗಳ ಹೊರಗೆ ಮತ್ತು ಭಾರತೀಯ ಗಡಿಯ ಸಮೀಪದಲ್ಲಿ ನಿಯೋಜಿಸಿರುವುದು ಅಚ್ಚರಿಯಾಗಿದೆ.

ಟಿಬೆನಲ್ಲಿ ಜೆ – 20 ವಿಮಾನವನ್ನು ಅನ್ನು ನಿಯೋಜಿಸುತ್ತಿರುವುದು ಇದೇ ಮೊದಲಲ್ಲ. 2020 ಮತ್ತು 2023 ರ ನಡುವೆ ಚೀನಾದ ಹೋಟಾನ್ ಪ್ರಾಂತ್ಯದ ಕ್ಸಿನ್ಜಿಯಾಂಗ್ನಲ್ಲಿ ಜೆಟ್​ಗಳನ್ನು ಇಡಲಾಗಿತ್ತು. ಆದಾಗ್ಯೂ, ಇದು ಜೆ -20ನ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ನಿಯೋಜನೆ ಎಂದು ನಂಬಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!